ADVERTISEMENT

ಗರ್ಭ ಕೊರಳ ಕ್ಯಾನ್ಸ್‌ರ್‌ಗೆ ಉಚಿತ ಲಸಿಕೆ ನೀಡಿ: ಡಾ.ಎ. ಸಾವಿತ್ರಿ

ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದಿಂದ ನಗರದಲ್ಲಿ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 14:22 IST
Last Updated 5 ಮಾರ್ಚ್ 2021, 14:22 IST
ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ ಜಿಲ್ಲಾ ಘಟಕದಿಂದ ಜಾಗೃತಿ ಜಾಥಾ ನಡೆಸಲಾಯಿತು.
ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ರಾಜ್ಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ ಜಿಲ್ಲಾ ಘಟಕದಿಂದ ಜಾಗೃತಿ ಜಾಥಾ ನಡೆಸಲಾಯಿತು.   

ಹಾಸನ: ಗರ್ಭ ಕೊರಳ ಕ್ಯಾನ್ಸ್‌ರ್‌ನಿಂದಾಗುವ ದುಷ್ಪರಿಣಾಮದ ಕುರಿತು ಅರಿವು ಮೂಡಿಸಲು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘ ಶುಕ್ರವಾರ ನಗರದಲ್ಲಿಜಾಗೃತಿ ಜಾಥಾ ನಡೆಸಿತು.

ಹೇಮಾವತಿ ಪ್ರತಿಮೆಯಿಂದ ಜಾಥಾ ಮೂಲಕ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ವೈದ್ಯರು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮಹಿಳಾ ದಿನಾಚರಣೆ ಅಂಗವಾಗಿ ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡೆಯಬೇಕು. ಎಚ್‍ಪಿವಿ ಎಂಬ ವೈರಸ್‍ನಿಂದ ಗರ್ಭಕೊರಳ ಕ್ಯಾನ್ಸರ್ ಪಸರಿಸುತ್ತಿದ್ದು, ದೇಶದಲ್ಲಿ ಪ್ರತಿ 7 ನಿಮಿಷಕ್ಕೆ ಒಬ್ಬರಂತೆ ನಿತ್ಯ 200 ಜನ ಮೃತಪಡುತ್ತಿದ್ದಾರೆ ಎಂದು ಸಂಘದ ಜಿಲ್ಲಾಧ್ಯಕ್ಷೆ ಡಾ.ಎ. ಸಾವಿತ್ರಿ ಹೇಳಿದರು.

ADVERTISEMENT

ಗರ್ಭಕೊರಳ ಕ್ಯಾನ್ಸ್‌ರ್‌ಗೆ ಲಸಿಕೆ ಲಭ್ಯವಿದ್ದು, ಸರ್ಕಾರ ಅದನ್ನು ಉಚಿತವಾಗಿ ವಿತರಿಸಬೇಕು. ಪಲ್ಸ್ ಪೊಲಿಯೊ ಮಾದರಿಯಲ್ಲಿ ಇದು ಸಹ ಅಭಿಯಾನವಾಗಬೇಕು.ಗ್ರಾಮೀಣ ಭಾಗದಲ್ಲಿ ಮಹಿಳೆಯರಿಗೆ ಅರಿವು ಮೂಡಿಸಲು ಪ್ರಚಾರ ಕಾರ್ಯಕ್ರಮಹಮ್ಮಿಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ಡಾ. ಸುಧಾ, ಪೂರ್ಣಿಮಾ, ಡಾ. ಭಾರತಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.