ADVERTISEMENT

ಹಾಸನ | ಗ್ರಾ.ಪಂ.‌ಚುನಾವಣೆ: ಕೈಕೈ ಮಿಲಾಯಿಸಿದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 28 ಜುಲೈ 2023, 9:38 IST
Last Updated 28 ಜುಲೈ 2023, 9:38 IST
   

ಜಾವಗಲ್(ಹಾಸನ): ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ವೇಳೆ ಸದಸ್ಯರು ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಆದರೆ, ಮಂಜಮ್ಮ ಅವರು ನಾಮಪತ್ರದ ಜೊತೆಗೆ ಜಾತಿ ಪ್ರಮಾಣಪತ್ರ ಸಲ್ಲಿಸಲಿಲ್ಲ.

ಚುನಾವಣಾ ಅಧಿಕಾರಿಯಾಗಿದ್ದ ಎಇಇ ಬಸವರಾಜು, ಜಾತಿ ಪ್ರಮಾಣಪತ್ರವನ್ನು ಸಲ್ಲಿಸುವಂತೆ ಸೂಚಿಸಿದರು. ಆದರೆ ನಿಗದಿತ ಸಮಯದಲ್ಲಿ ಮಂಜಮ್ಮ ಅವರು, ಜಾತಿ ಪ್ರಮಾಣಪತ್ರವನ್ನು ನಿಗದಿತ ಸಮಯದ ಒಳಗೆ ಸಲ್ಲಿಸದೇ ಇರುವುದರಿಂದ ಅವರ ನಾಮಪತ್ರವನ್ನು ವಜಾಗೊಳಿಸಿ ಚುನಾವಣೆಯನ್ನು ಮುಂದೂಡುವಂತೆ ಮತ್ತೊಂದು ಸದಸ್ಯರ ಗುಂಪು ಆಗ್ರಹಿಸಿತು. ಈ ಹಂತದಲ್ಲಿ ಇನ್ನೊಂದು ಗುಂಪು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತು. ಈ ಹಂತದಲ್ಲಿ ಪರಸ್ಪರ ಕೈ ಕೈ ಮಿಲಾಯಿಸುವ ಹಂತದವರೆಗೂ ತಲುಪಿತು.

ADVERTISEMENT

ಪಿಡಿಓ ರವಿ ಆಹ್ವಾನದ ಮೇರೆಗೆ ಚುನಾವಣೆಗೆ ಪತ್ರಕರ್ತರನ್ನು ಹೊರ ಹಾಕುವಂತೆ ಎ.ಇ.ಇ ಬಸವರಾಜು ಸೂಚಿಸಿದರು. ಇದರಿಂದ ಪತ್ರಕರ್ತರು ಗ್ರಾಮ ಪಂಚಾಯಿತಿ ಆವರಣದ ಮುಂಭಾಗ ಶಾಂತಿಯುತವಾಗಿ ಧರಣಿ ನಡೆಸಿದರು.

ಈ ಧರಣಿಯಲ್ಲಿ ಗ್ರಾಮದ ಬಹುತೇಕ ಸಾರ್ವಜನಿಕರು ಭಾಗವಹಿಸಿ ಪತ್ರಕರ್ತರ ಪರವಾಗಿ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.