ADVERTISEMENT

ಯುವತಿಯರಿಗೆ ಕಿರುಕುಳ: ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 14:17 IST
Last Updated 5 ಅಕ್ಟೋಬರ್ 2024, 14:17 IST

ಹೊಳೆನರಸೀಪುರ: ಪಟ್ಟಣದಲ್ಲಿ ಯುವಕನೊಬ್ಬ ಯುವತಿಯರಿಗೆ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿರುವುದಾಗಿ ಯುವತಿಯೊಬ್ಬಳು ಪೊಲೀಸರಿಗೆ ಅನಾಮಧೇಯ ದೂರು ಸಲ್ಲಿಸಿದ್ದಾರೆ.

ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳ ಮತ್ತು ಸಾರ್ವಜನಿಕ ಕಚೇರಿಗಳಲ್ಲಿ ಯುವತಿ ಒಬ್ಬರೇ ಇರುವಾಗ, ‘ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಅರ್ಜೆಂಟ್ ಒಂದು ಕರೆ ಮಾಡಿಕೊಡುತ್ತೇನೆ’ ಎಂದು ವಿನಂತಿಸಿ ಅವರ ಮೊಬೈಲ್ ಪಡೆದು ಕರೆ ಮಾಡುವ ಈ ಯುವಕ, ಆ ಮೊಬೈಲ್‍ಗೆ ಬರುವ ಕರೆಗಳು, ಮೆಸೇಜ್‍ಗಳು, ವಾಟ್ಸ್ ಆ‍್ಯಪ್ ಮೆಸೇಜ್‍ಗಳು, ವಿಡಿಯೊಗಳನ್ನು ತನ್ನ ಮೊಬೈಲ್‍ಗೂ ಬರುವಂತೆ ಮಾಡಿಕೊಳ್ಳುತ್ತಾನೆ. ನಂತರ ಅವರ ಮೊಬೈಲ್‍ಗೆ ಬರುವ ಎಲ್ಲ ಕರೆ, ಸಂದೇಶಗಳನ್ನು ನೋಡಿ, ಬ್ಲಾಕ್‌ಮೇಲ್‌ ಮಾಡುತ್ತಿದ್ದು, ₹ 5 ಸಾವಿರ, ₹ 10 ಸಾವಿರ ನೀಡುವಂತೆ ಪೀಡಿಸುತ್ತಿರುವುದಾಗಿ ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಯುವತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮಹಿಳೆಯರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ನನ್ನ ಹೆಸರು ಮತ್ತು ವಿಳಾಸ ಇಲ್ಲದ ಅರ್ಜಿಯನ್ನು ಪೊಲೀಸರಿಗೆ ಸಲ್ಲಿಸಿದ್ದೇನೆ. ಪೊಲೀಸರು ಈ ಅನಾಮಧೇಯ ದೂರು ದಾಖಲಿಸಿಕೊಂಡು ಯುವಕನನ್ನು ಬಂಧಿಸುವಂತೆ ಯುವತಿಯೊಬ್ಬರು ಆಗ್ರಹಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.