ADVERTISEMENT

ಅರಸೀಕೆರೆ | ಸಮಯಕ್ಕೆ ಬಾರದ ಬಸ್‌: ಪರದಾಟ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 7:23 IST
Last Updated 16 ಜೂನ್ 2024, 7:23 IST

ಅರಸೀಕೆರೆ ಬಸ್‌ ನಿಲ್ದಾಣದಲ್ಲಿ ನೂಕುನುಗ್ಗಲಿನಲ್ಲಿಯೇ ಬಸ್ ಹತ್ತುತ್ತಿರುವ ಪ್ರಯಾಣಿಕರು

ಅರಸೀಕೆರೆ ಬಸ್‌ ನಿಲ್ದಾಣದಲ್ಲಿ ನೂಕುನುಗ್ಗಲಿನಲ್ಲಿಯೇ ಬಸ್ ಹತ್ತುತ್ತಿರುವ ಪ್ರಯಾಣಿಕರು

ಅರಸೀಕೆರೆ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಟ್ಟ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ನಿತ್ಯ ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮೀಣ ಭಾಗದ ಜನರ ಸುಗಮ ಸಂಚಾರಕ್ಕೆ ಬಸ್‌ಗಳಿಲ್ಲದೇ ಪರದಾಡುವಂತಾಗಿದೆ .

ADVERTISEMENT

ಬೇಸಿಗೆ ರಜೆ ಮುಗಿದಿದ್ದು, ಶಾಲಾ– ಕಾಲೇಜುಗಳು ಆರಂಭವಾಗಿವೆ. ಬೆಳಿಗ್ಗೆ 8 ರಿಂದ 11 ಗಂಟೆ ಹಾಗೂ ಸಂಜೆ 4 ರಿಂದ 6 ಗಂಟೆಯವರೆಗೆ ತಾಲ್ಲೂಕಿನ ವಿದ್ಯಾರ್ಥಿಗಳು, ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗುತ್ತಿದೆ.

ವಿದ್ಯಾರ್ಥಿಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ನೌಕರರಿಗೆ ಸರ್ಕಾರಿ ಬಸ್‌ಗಳೇ ಆಧಾರವಾಗಿದ್ದು, ಈ ಸಮ ಯದಲ್ಲಿ ಊರುಗಳಿಂದ ಬರುವುದಕ್ಕೆ ಹಾಗೂ ಮನೆಗೆ ಹಿಂತಿರುಗಿ ಹೋಗು ವುದಕ್ಕೆ ಗಂಟೆಗಟ್ಟಲೇ ಕಾಯು ವಂತಾಗಿದೆ. ಈ ಸಮಯದಲ್ಲಿ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ದುಪ್ಪಟ್ಟು ಪ್ರಯಾಣಿಕರನ್ನು ನೂಕುನುಗ್ಗಲಿನಲ್ಲಿ ಕರೆದೊಯ್ಯುವ ದೃಶ್ಯ ಸಾಮಾನ್ಯವಾಗಿದೆ.

‘ಅರಸೀಕೆರೆ ತಾಲ್ಲೂಕಿನಲ್ಲಿ ಜಾವಗಲ್, ಕಣಕಟ್ಟೆ, ಗಂಡಸಿ, ಕಸಬಾ ಹೋಬಳಿಗಳಿದ್ದು, ಗ್ರಾಮೀಣ ಭಾಗದ ರೈತರು, ಸಾರ್ವಜನಿಕರು ಹೆಚ್ಚಾಗಿ ಬಸ್‍ಗಳನ್ನೇ ಅವಲಂಬಿಸಿದ್ದಾರೆ. ಗ್ರಾಮೀಣ ಭಾಗದ ಬಸ್‍ಗಳ ಸಂಖ್ಯೆ ಕಡಿಮೆ ಇರುವುದರಿಂದ ನಿತ್ಯ ಜನರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಖಾಸಗಿ ಆಟೊ, ಟೆಂಪೊ ಅವಲಂಬಿಸುವಂತಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ತಾಲ್ಲೂಕಿನಲ್ಲಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಬೇಕು’ ಎನ್ನುವುದು ಪೋಷಕರ ಒತ್ತಾಯ.

ಸರ್ಕಾರಿ ಬಸ್‌ಗಳಲ್ಲಿ ಶೇ50ರಷ್ಟು ಪುರುಷರಿಗೆ ಮೀಸಲು ಎಂದು ಹೇಳಿದ್ದು, ಶಕ್ತಿ ಯೋಜನೆಯಿಂದಾಗಿ ಬಸ್‌ನಲ್ಲಿ ಮಹಿಳೆಯರು ಸಂಖ್ಯೆಯೇ ಹೆಚ್ಚಾಗಿದೆ. ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಕಾಸು ಕೊಟ್ಟರೂ ನಿಂತುಕೊಂಡೇ ಪ್ರಯಾಣಿಸಬೇಕು. ಮಹಿಳೆಯರಿಗೆ ಉಚಿತ ಪ್ರಯಾಣ ಸಂತೋಷ. ಆದರೆ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ ಸೂಕ್ತ ಬಸ್‌ಗಳ ವ್ಯವಸ್ಥೆ ಆಗಬೇಕು ಎಂಬುದು ಪ್ರಯಾಣಿಕರ ಬೇಡಿಕೆ.

ಹೊಗೆ ಉಗುಳುವ ಗಾಡಿಗಳು: ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲಾ ಕೇಂದ್ರಕ್ಕೆ ಹೋಗುವ ಬಸ್‍ಗಳು ಹೊಗೆ ಉಗುಳುತ್ತ ಸಾಗುವುದು ಸಾಮಾನ್ಯವಾಗಿದೆ. ಇವುಗಳ ದುರಸ್ತಿ ಕೂಡ ಅಗತ್ಯವಿದೆ. ಇಲ್ಲವಾದರೇ ಬದಲಾವಣೆ ಮಾಡಬೇಕಿದೆ.

ಅರಸೀಕೆರೆ ನಗರವು 2 ರಾಷ್ಟ್ರೀಯ ಹೆದ್ದಾರಿಗಳನ್ನು ಹೊಂದಿದ್ದು, ಶಿವಮೊಗ್ಗ, ಬೆಂಗಳೂರು, ಮೈಸೂರು, ಮಂಡ್ಯ, ಚಿತ್ರದುರ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಕೇಂದ್ರವಾಗಿದೆ. ರೈಲ್ವೆ ಜಂಕ್ಷನ್ ಸಹ ಇರುವುದರಿಂದ ಇಲ್ಲಿ ಜನರ ದಟ್ಟಣೆಯೂ ಹೆಚ್ಚಿದ್ದು, ಅವರ ಅನುಕೂಲಕ್ಕೆ ಸಮಯಕ್ಕೆ ಸರಿಯಾಗಿ ಬಸ್‍ಗಳ ವ್ಯವಸ್ಥೆ ಮಾಡಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಅರಸೀಕೆರೆ ಘಟಕದಿಂದ 75 ಬಸ್‍ಗಳಿದ್ದು, 550 ಹಳ್ಳಿಗಳ ಸಂಪರ್ಕಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು, ನೌಕರರಿಗೆ ಬೆಳಿಗ್ಗೆ, ಸಂಜೆ ಹೆಚ್ಚುವರಿ ಬಸ್‌ ಒದಗಿಸಲಾಗುವುದುಕುಮಾರ್,

-ಅರಸೀಕೆರೆ ಘಟಕ ಡಿಪೊ ಮ್ಯಾನೇಜರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.