ADVERTISEMENT

ಹಾಸನಾಂಬ ಜಾತ್ರೆ: ಇಸ್ಕಾನ್ ಉಸ್ತುವಾರಿಯಲ್ಲಿ ಲಾಡು ತಯಾರಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2024, 14:41 IST
Last Updated 30 ಸೆಪ್ಟೆಂಬರ್ 2024, 14:41 IST
<div class="paragraphs"><p>ಹಾಸನಾಂಬ ದೇಗುಲದ ಗರ್ಭಗುಡಿಯ ಬಳಿ ಭಕ್ತರ ಸಾಲು</p></div>

ಹಾಸನಾಂಬ ದೇಗುಲದ ಗರ್ಭಗುಡಿಯ ಬಳಿ ಭಕ್ತರ ಸಾಲು

   

ಹಾಸನ: ‘ಹಾಸನಾಂಬ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವ ಅಕ್ಟೋಬರ್ 24ರಿಂದ ಆರಂಭವಾಗಲಿದ್ದು, ಈ ಬಾರಿ ಇಸ್ಕಾನ್‌ ಉಸ್ತುವಾರಿಯಲ್ಲಿ ಲಾಡು ಪ್ರಸಾದ ತಯಾರಿಸಿ ವಿತರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ ತಿಳಿಸಿದರು.

ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಈ ಬಾರಿ ವಿಶೇಷ ದರ್ಶನದ ₹ 1 ಸಾವಿರ ಬೆಲೆಯ ಪಾಸ್‌ಗೆ ಎರಡು ಹಾಗೂ ₹300ರ ಪಾಸ್‌ಗೆ ಒಂದು ಲಾಡು ನೀಡಲು ನಿರ್ಧರಿಸಲಾಗಿದೆ’ ಎಂದರು.

ADVERTISEMENT

‘ಈ ಬಾರಿ ಒಂಬತ್ತು ದಿನ ದರ್ಶನೋತ್ಸವ ಇರಲಿದ್ದು, ದಿನದ 24 ಗಂಟೆಯೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಧಾರ್ಮಿಕ ಆಚರಣೆಗಳಿಗೆ ಧಕ್ಕೆಯಾಗದಂತೆ ಪೂಜಾ ಸಮಯ ಕಡಿಮೆ ಮಾಡುವಂತೆ ಅರ್ಚಕರನ್ನು ಕೋರಲಾಗುವುದು’ ಎಂದರು.

‘ಪ್ರತಿ ಭಕ್ತರಿಗೂ ದೊನ್ನೆ ಪ್ರಸಾದ ನೀಡಲಿದ್ದು, ಪ್ರತಿ ಮೂರು ಗಂಟೆಗೊಮ್ಮೆ ಪ್ರಸಾದ ಬದಲಿಸಲಾಗುವುದು. ಪುಳಿಯೋಗರೆ, ಪಲಾವ್, ಪೊಂಗಲ್ ಸೇರಿದಂತೆ ವಿವಿಧ ಬಗೆಯ ಪ್ರಸಾದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ದೇವಸ್ಥಾನದ ಆಡಳಿತಾಧಿಕಾರಿಯೂ ಆದ ಉಪ ವಿಭಾಗಾಧಿಕಾರಿ ಮಾರುತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.