ಹಾಸನ: ಇಲ್ಲಿನ ಹಾಸನಾಂಬಾ ಜಾತ್ರೆ ಗುರುವಾರ ಮುಕ್ತಾಯವಾಗಿದ್ದು, ₹ 1 ಸಾವಿರ ಹಾಗೂ ₹ 300 ಬೆಲೆಯ ವಿಶೇಷ ದರ್ಶನದ ಟಿಕೆಟ್, ಲಾಡು ಮಾರಾಟದಿಂದ ₹ 1.70 ಕೋಟಿ ಸಂಗ್ರಹವಾಗಿದೆ. 6 ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದಾರೆ. ಕಾಣಿಕೆ ಹುಂಡಿ ಹಣದ ಎಣಿಕೆ ನಡೆಯಬೇಕಾಗಿದೆ.
ಜಾತ್ರೆ ಕೊನೆಯ ದಿನ ಗುಡಿಯೊಳಗೆ ದೀಪ ಹಚ್ಚಿ, ಹೂವು, ನೈವೇದ್ಯ ಸಮರ್ಪಿಸಿ, ಮಧ್ಯಾಹ್ನ 12.47ಕ್ಕೆ ಬಾಗಿಲು ಮುಚ್ಚಲಾಯಿತು. ಈ ವರ್ಷ ಅ. 13 ರಿಂದ 27 ರವರೆಗೆ ಗುಡಿಯ ಬಾಗಿಲು ತೆದಿದ್ದು, 12 ದಿನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮುಂದಿನ ವರ್ಷ ನ. 2ರಿಂದ 15ರವರೆಗೆ ದೇವಿ ದರ್ಶನ ನಿಗದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.