ADVERTISEMENT

ಹಾಸನಾಂಬೆ ದರ್ಶನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2024, 21:31 IST
Last Updated 3 ನವೆಂಬರ್ 2024, 21:31 IST
ಹಾಸನದ ಹಾಸನಾಂಬ ದೇಗುಲದ ಗರ್ಭಗುಡಿಗೆ ಭಾನುವಾರ ಮಧ್ಯಾಹ್ನ ಬೀಗ ಹಾಕಲಾಯಿತು
ಹಾಸನದ ಹಾಸನಾಂಬ ದೇಗುಲದ ಗರ್ಭಗುಡಿಗೆ ಭಾನುವಾರ ಮಧ್ಯಾಹ್ನ ಬೀಗ ಹಾಕಲಾಯಿತು    

ಹಾಸನ: ಇಲ್ಲಿನ ಶಕ್ತಿದೇವತೆ ಹಾಸನಾಂಬ ದರ್ಶನೋತ್ಸವಕ್ಕೆ ಭಾನುವಾರ ತೆರೆ ಬಿದ್ದಿತು. ಮಧ್ಯಾಹ್ನ 12.33ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಲಾಯಿತು.

ಸಂಪ್ರದಾಯದಂತೆ ಪೂಜೆ, ನೈವೇದ್ಯ ಮಾಡಿ, ನಂದಾದೀಪ ಹಚ್ಚಿಟ್ಟ ಅರ್ಚಕರು, ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿ, ಕೀಲಿಯನ್ನು ದೇವಾಲಯದ ಆಡಳಿತಾಧಿಕಾರಿಗೆ ಹಸ್ತಾಂತರಿಸಿದರು.

ಮುಂದಿನ ವರ್ಷ ಅ. 9ರಿಂದ ಅ.23ರವರೆಗೆ ಹಾಸನಾಂಬ ದೇಗುಲ ಬಾಗಿಲು ತೆರೆಯಲಿದ್ದು, ಭಕ್ತರಿಗೆ ದರ್ಶನ ಲಭ್ಯವಾಗಲಿದೆ. ಈ ಬಾರಿ 20 ಲಕ್ಷ ಭಕ್ತರು ದರ್ಶನ ಪಡೆದಿದ್ದು, ಟಿಕೆಟ್‌, ಲಾಡು ಮಾರಾಟದಿಂದ ₹9 ಕೋಟಿ ಆದಾಯ ಸಂಗ್ರಹವಾಗಿದೆ ಎಂದು ಅಂದಾಜಿಸಲಾಗಿದೆ.

ADVERTISEMENT

ಸಚಿವ ರಾಜಣ್ಣ ಗೈರು: ಹಾಸನಾಂಬ ಜಾತ್ರೆಯ ಆರಂಭವಾದ ಅ.24 ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಿದ್ದ ಅ.28ರಂದು ಹಾಸನಾಂಬೆ ದೇಗುಲಕ್ಕೆ ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್‌. ರಾಜಣ್ಣ, ಭಾನುವಾರ ಗೈರು ಹಾಜರಾಗಿದ್ದರು. ರಾಜ್ಯೋತ್ಸವದ ಧ್ವಜಾರೋಹಣಕ್ಕೆ ಸಚಿವರು ಬಂದಿರಲಿಲ್ಲ. ಹಾಸನಾಂಬ ದೇವಿ ದರ್ಶನದಲ್ಲಿ ಅವ್ಯವಸ್ಥೆ ಉಂಟಾದ ನಂತರ ಸಚಿವ ರಾಜಣ್ಣ ಜಿಲ್ಲೆಗೆ ಬಾರದೇ ಇರುವುದು ಸ್ಥಳೀಯರಲ್ಲಿ ಆಕ್ರೋಶ ಉಂಟು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.