ADVERTISEMENT

ಹಾಸನ ಲೋಕಸಭಾ ಕ್ಷೇತ್ರ: 29 ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 15:58 IST
Last Updated 4 ಏಪ್ರಿಲ್ 2024, 15:58 IST

ಹಾಸನ: ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರಗಳ ಸಲ್ಲಿಕೆ ಗುರುವಾರ ಅಂತ್ಯಗೊಂಡಿದ್ದು, ಒಟ್ಟು 29  ನಾಮಪತ್ರಗಳು ಸಲ್ಲಿಕೆಯಾಗಿವೆ.

ಪ್ರಜ್ವಲ್ ಆರ್. (ಜಾತ್ಯತೀತ ಜನತಾದಳ), ಜೆ.ಕೆ. ಚಿಕ್ಕಯ್ಯ(ಪಕ್ಷೇತರ), ಬಿ.ಎನ್. ಸುರೇಶ್(ಪಕ್ಷೇತರ),  ಶ್ರೇಯಸ್ ಎಂ. ಪಟೇಲ್ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಹೇಮಂತ್ ಕುಮಾರ್ ಬಿ.ಎನ್. (ಪಕ್ಷೇತರ), ಆನಂದ್ ಜಿ.ಎನ್. (ಭಾರತೀಯ ಡಾ. ಬಿ.ಆರ್. ಅಂಬೇಡ್ಕರ್ ಜನತಾಪಕ್ಷ), ಎಸ್.ಕೆ. ನಿಂಗರಾಜ (ಬಹುಜನ್ ಭಾರತ್ ಪಾರ್ಟಿ), ಪರಮೇಶ ಎನ್.ಎಂ. (ಪಕ್ಷೇತರ), ಸಿದ್ಧಾಭೋವಿ (ಪಕ್ಷೇತರ), ಶೇಖ್ ಅಹಮದ್ (ನವರಂಗ್ ಕಾಂಗ್ರೆಸ್), ಶಿವರಾಜ್ ಬಿ. (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಭಾರತ್) ಅವರು  ಗುರುವಾರ ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ನಾಮಪತ್ರವನ್ನು ಸಲ್ಲಿಸಿದರು.

ದೇವರಾಜಾಚಾರಿ ಎಂ.ವೈ.(ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ), ಆರ್.ಜಿ. ಸತೀಶ್(ಪಕ್ಷೇತರ), ಎಚ್.ಡಿ. ರೇವಣ್ಣ(ಪೂರ್ವಾಂಚಲ ಮಹಾಪಂಚಾಯತ್ ಪಕ್ಷ), ಗಂಗಾಧರ ಡಿ.ಎಸ್.(ಬಹುಜನ ಸಮಾಜ ಪಕ್ಷ), ಹೊಳೆಯಪ್ಪ ಜಿ.(ಲೋಕ್ ಶಕ್ತಿ), ಎಂ. ಮಹೇಶ್ ಉರ್ಫ್ ಹರ್ಷ(ಪಕ್ಷೇತರ), ಬಸವರಾಜು ಜೆ.ಡಿ. (ಪಕ್ಷೇತರ), ಸಂತೋಷ್ ಬಿ.ಎನ್.(ಅಖಿಲ ಭಾರತ ಹಿಂದೂ ಮಹಾಸಭಾ), ಪ್ರತಾಪ ಕೆ.ಎ.(ಉತ್ತಮ ಪ್ರಜಾಕೀಯ ಪಾರ್ಟಿ), ಕೆ.ಆರ್. ಗಂಗಾಧರ(ಪಕ್ಷೇತರ) ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ADVERTISEMENT

ಶುಕ್ರವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏ.8ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.