ADVERTISEMENT

ಹೃದಯ ಚಿಕಿತ್ಸೆ: ಝಿರೋ ಟ್ರಾಫಿಕ್‌ನಲ್ಲಿ ಬಾಲಕ ಬೆಂಗಳೂರಿಗೆ

​ಪ್ರಜಾವಾಣಿ ವಾರ್ತೆ
Published 25 ಮೇ 2024, 15:21 IST
Last Updated 25 ಮೇ 2024, 15:21 IST

ಹಾಸನ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಹದಿನಾಲ್ಕು ವರ್ಷದ ಅಂಗವಿಕಲ ಬಾಲಕನನ್ನು ಆಂಬುಲೆನ್ಸ್ ಮೂಲಕ ಝಿರೋ ಟ್ರಾಫಿಕ್‌‌ನಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ನಗರದ 80 ಅಡಿ ರಸ್ತೆಯ ನಿವಾಸಿ ಅಮ್ಜದ್‌ ಪಾಷಾ- ರಜೀಯಾಬೇಗಂ ದಂಪತಿಯ ಪುತ್ರ ಮಹಮದ್ ಕೈಫ್ (14) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ನಾಲ್ಕು ದಿನಗಳಿಂದ ಹಿಮ್ಸ್‌ನ ಚಾಮರಾಜೇಂದ್ರ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ.

ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸಲಹೆ ಮಾಡಿದ್ದರು. ಅದರಂತೆ ಶನಿವಾರ ಬೆಳಿಗ್ಗೆ ಇಲ್ಲಿಂದ ಆಂಬುಲೆನ್ಸ್‌ನಲ್ಲಿ ಕೈಫ್‌ನನ್ನು ಕರೆದೊಯ್ಯಲಾಗಿದ್ದು, ನಾಲ್ಕು ಗಂಟೆಗಳಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿದರು.

ADVERTISEMENT

ಆಂಬುಲೆನ್ಸ್‌ ಮುಂಭಾಗದಲ್ಲಿ ಇನ್ನೆರಡು ಆಂಬುಲೆನ್ಸ್‌ಗಳು ಹಾಸನ ಹಿಮ್ಸ್‌ ಆಸ್ಪತ್ರೆಯಿಂದ ಝಿರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ತೆರಳಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.