ADVERTISEMENT

ಹೊಳೆನರಸೀಪುರ: ಗುಂಡಿ ಬಿದ್ದ ರಸ್ತೆ, ಹೆಚ್ಚಿದ ಬೀದಿನಾಯಿ ಕಾಟ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 14:26 IST
Last Updated 7 ನವೆಂಬರ್ 2024, 14:26 IST
ಹೊಳೆನರಸೀಪುರ ಪುರಸಭೆ ಕಚೇರಿಯ ಪಕ್ಕದಲ್ಲಿ ಹಾಗೂ ಮಹಾತ್ಮಾಗಾಂಧಿ ವೃತ್ತದಲ್ಲಿ ಬಿದ್ದಿರುವ ಗುಂಡಿಗಳು
ಹೊಳೆನರಸೀಪುರ ಪುರಸಭೆ ಕಚೇರಿಯ ಪಕ್ಕದಲ್ಲಿ ಹಾಗೂ ಮಹಾತ್ಮಾಗಾಂಧಿ ವೃತ್ತದಲ್ಲಿ ಬಿದ್ದಿರುವ ಗುಂಡಿಗಳು   

ಹೊಳೆನರಸೀಪುರ: ದೀಪದ ಕೆಳಗೆ ಕತ್ತಲು ಎನ್ನುವಂತೆ ಪುರಸಭೆಯ ಪಕ್ಕ, ಕೋಟೆ ಪ್ರವೇಶ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಮಳೆ ಬಂದರೆ ನೀರು ನಿಂತು, ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ.

ಪುರಸಭೆ ಮುಂಭಾಗದ ಗಾಂಧಿ ವೃತ್ತ, ಸುಭಾಷ್ ವೃತ್ತ, ಹಾಸನ–  ಮೈಸೂರು ರಸ್ತೆಯ ಕೋಳಿ ಅಂಗಡಿ ಮುಂಭಾಗ, ಹೌಸಿಂಗ್ ಬೋರ್ಡ್‌ನಿಂದ ಎಲ್.ಐ.ಸಿ ಕಚೇರಿಗೆ ಹೋಗುವ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಗುಂಡಿ ಬಿದ್ದು ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ, ಆದರೂ  ಸಾರ್ವಜನಿಕರು ಪುರಸಭೆ ಆಡಳಿತದವರು ಕ್ರಮ ಕೈಗೊಂಡು ದುರಸ್ತಿ ಮಾಡಿಸಿಲ್ಲ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಪೇಟೆ, ಕೋಟೆ ಮುಖ್ಯರಸ್ತೆ, ಹೌಸಿಂಗ್ ಬೋರ್ಡ್ ವೃತ್ತ, ನರಸಿಂಹನಾಯಕ ನಗರ, ತಾಲ್ಲೂಕು ಕಚೇರಿ ರಸ್ತೆ, ಅರಕಲಗೂಡು ರಸ್ತೆ, ರಿವರ್ ಬ್ಯಾಂಕ್ ರಸ್ತೆಗಳಲ್ಲಿ ನಾಯಿಗಳು ಹಿಂಡು, ಹಿಂಡಾಗಿ ತಿರುಗುತ್ತಾ ಕಚ್ಚಾಡುತ್ತಾ, ಬೊಗಳುತ್ತಾ ಆತಂಕ ಸೃಷ್ಟಿಸುತ್ತಿವೆ. ಈ ಹಿಂದೆ ನಾಯಿಗಳ ಹಿಂಡು ನರಸಿಂಹನಾಯಕ ನಗರದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿದ್ದವು. ಈ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.

ADVERTISEMENT

‘ಆಗ ಪುರಸಭೆ ಅಧಿಕಾರಿಗಳು ರಸ್ತೆ ಡಾಂಬರೀಕರಣಗೊಳಿಸುವ, ನಾಯಿಗಳನ್ನು ಹಿಡಿಸುವ ಬಗ್ಗೆ ಮಾತನಾಡಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ನರಸಿಂಹನಾಯಕನಗರದ ನಿವಾಸಿ ವಸಂತ, ರಮೇಶ, ಪ್ರವೀಣ ದೂರಿದ್ದಾರೆ.

ಹೊಳೆನರಸೀಪುರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಸಂಸದ ಶ್ರೇಯಸ್ ಪಟೇಲ್ ಅವರ ಮನೆ ಇರುವ ರಿವರ್‌ ಬ್ಯಾಂಕ್ ರಸ್ತೆಯಲ್ಲಿ ಹಿಂಡಾಗಿ ತಿರುತ್ತಿರುವ ನಾಯಿಗಳು

ಹೊಳೆನರಸೀಪುರ: ದೀಪದ ಕೆಳಗೆ ಕತ್ತಲು ಎನ್ನುವಂತೆ ಪುರಸಭೆಯ ಪಕ್ಕ ಕೋಟೆ ಪ್ರವೇಶ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದು ಮಳೆ ಬಂದರೆ ನೀರು ನಿಂತು ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ.

ಪುರಸಭೆ ಮುಂಭಾಗದ ಗಾಂಧಿ ವೃತ್ತ ಸುಭಾಷ್ ವೃತ್ತ ಹಾಸನ– ಮೈಸೂರು ರಸ್ತೆಯ ಕೋಳಿ ಅಂಗಡಿ ಮುಂಭಾಗ ಹೌಸಿಂಗ್ ಬೋರ್ಡ್‌ನಿಂದ ಎಲ್.ಐ.ಸಿ ಕಚೇರಿಗೆ ಹೋಗುವ ರಸ್ತೆ ಸೇರಿದಂತೆ ಅನೇಕ ರಸ್ತೆಗಳು ಗುಂಡಿ ಬಿದ್ದು ವಾಹನಗಳ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತಿದೆ ಆದರೂ ಈ ಬಗ್ಗೆ ಪತ್ರಿಕೆ ವಿಶೇಷ ವರದಿ ಪ್ರಕಟಿಸಿತ್ತು. ಆದರೂ ಅದನ್ನು ಮುಚ್ಚಿ ಸಾರ್ವಜನಿಕರಿಗೆ ಹಾಗೂ ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಸಾರ್ವಜನಿಕರು ಪುರಸಭೆ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ನಾಯಿಗಳ ಕಾಟ ಹೆಚ್ಚಾಗಿದೆ. ಪೇಟೆ ಕೋಟೆ ಮುಖ್ಯರಸ್ತೆ ಹೌಸಿಂಗ್ ಬೋರ್ಡ್ ವೃತ್ತ ನರಸಿಂಹನಾಯಕನಗರ ತಾಲ್ಲೂಕು ಕಚೇರಿ ರಸ್ತೆ ಅರಕಲಗೂಡು ರಸ್ತೆ ರಿವರ್ ಬ್ಯಾಂಕ್ ರಸ್ತೆಗಳಲ್ಲಿ ಹತ್ತಾರು ನಾಯಿಗಳು ಹಿಂಡು ಹಿಂಡಾಗಿ ತಿರುಗುತ್ತಾ ಕಚ್ಚಾಡುತ್ತಾ ಬೊಗಳುತ್ತಾ ಆತಂಕ ಸೃಷ್ಟಿಸುತ್ತಿವೆ. ಈ ಹಿಂದೆ ನಾಯಿಗಳ ಹಿಂಡು ನರಸಿಂಹನಾಯಕ ನಗರದ ಬಾಲಕನೊಬ್ಬನ ಮೇಲೆ ದಾಳಿ ನಡೆಸಿದ್ದವು. ಈ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.

ಆಗ ಪುರಸಭೆ ಅಧಿಕಾರಿಗಳು ರಸ್ತೆ ಡಾಂಬರಿಕರಣಗೊಳಿಸುವ ನಾಯಿಗಳನ್ನು ಹಿಡಿಸುವ ಬಗ್ಗೆ ಮಾತನಾಡಿದ್ದರು. ಆದರೆ ಇದುವರೆವಿಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನರಸಿಂಹನಾಯಕನಗರದ ನಿವಾಸಿ ವಸಂತ ರಮೇಶ ಪ್ರವೀಣ ದೂರಿದ್ದಾರೆ. ರಸ್ತೆ ಗುಂಡಿಗಳಲ್ಲಿ ಇಳಿದು ಬೈಕ್‍ಸಾವಾರರು ಪ್ರಾಣ ಕಳೆದುಕೊಂಡರೆ ನಾಯಿಗಳುಕಚ್ಚಿ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಕೇಳುವ ಪ್ರಶ್ನಗೆ ಪುರಸಭೆ ಉತ್ತರಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.