ADVERTISEMENT

ಹೊಳೆನರಸೀಪುರ: ವೃದ್ಧೆಯ ಕೈಕಾಲು ಕಟ್ಟಿ ಚಿನ್ನಾಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:55 IST
Last Updated 20 ಜುಲೈ 2024, 13:55 IST
ದರೋಡೆ ಕೋರರ ದಾಳಿಗೆ ಒಳಗಾದ ವೃದ್ಧೆ ಪ್ರಭಾವತಿ. 
ದರೋಡೆ ಕೋರರ ದಾಳಿಗೆ ಒಳಗಾದ ವೃದ್ಧೆ ಪ್ರಭಾವತಿ.    

ಹೊಳೆನರಸೀಪುರ: ಪಟ್ಟಣದ ಕಾರ್ಯಾಲಯ ಬಡಾವಣೆಯ 2ನೇ ಅಂತಸ್ತಿನ ಮನೆಗೆ ನುಗ್ಗಿ ಮನೆಯಲ್ಲಿದ್ದ ವೃದ್ದೆಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಚಿನ್ನದ ಸರ ಹಾಗೂ ಬೆಳ್ಳಿಯ ವಸ್ತುಗಳನ್ನು ದೋಚಿರುವ ಘಟನೆ ಶನಿವಾರ ಬೆಳಗಿನ ಜಾವ ನಡೆದಿದೆ.

ಮನೆಯ ಮಾಲೀಕ ಕೆಇಬಿಯ ನಿವೃತ್ತ ನೌಕರ ಸಣ್ಣತಮ್ಮಣ್ಣ ಶೆಟ್ಟಿ ಅವರು ಬೆಂಗಳೂರಿಗೆ ಹೋಗಿದ್ದರು. ಮನೆಯಲ್ಲಿ ಅವರ ಪತ್ನಿ ಪ್ರಭಾವತಿ (65) ಮನೆಯಲ್ಲಿ ಒಬ್ಬರೇ ಇದ್ದರು. ಶುಕ್ರವಾರ ತಡರಾತ್ರಿಯ ವೇಳೆ ಸರಳುಗಳಿಲ್ಲದ ಮನೆಯ ಹಿಂದಿನ ಕಿಟಕಿಗೆ ಹಾಕಿದ್ದ ತೆಳುವಾದ ವೈರ್‍ಮೆಸ್ ಕತ್ತರಿಸಿ ಮನೆಯ ಒಳಗೆ ನುಗ್ಗಿದ ಇಬ್ಬರು ದರೋಡೆಕೋರರು ವೃದ್ಧ ಮಹಿಳೆಯನ್ನು ಗಟ್ಟಿಯಾಗಿ ಹಿಡಿದು ಕೈಕಾಲಿಗೆ ದಾರಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು, ನಂತರ ಬೀರುವಿನ ಕೀ ಕಸಿದು ಬೀರುವಿನಲ್ಲಿದ್ದ ಬೆಳ್ಳೆಯ ಸಮಾನುಗಳು ಹಾಗೂ ಬೀರುವಿನಲ್ಲಿದ್ದ ಹಣವನ್ನು ದೋಚಿ ಮುಂಭಾಗದ ಬಾಗಿಲಿನ ಕೀತೆರೆದು ಮೆಟ್ಟಲಿಳಿದು ಹೋಗಿದ್ದಾರೆ.

ಬೆಳಿಗ್ಗೆ ಪೊಲೀಸರಿಗೆ ವಿಷಯ ತಿಳಿಸುತ್ತಿದ್ದಂತೆ ಕ್ರೈಂ ಸಬ್‍ಇನ್‍ಸ್ಪೆಕ್ಟರ್ ರಂಗಸ್ವಾಮಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಕಳ್ಳರು ವೃದ್ದೆಯನ್ನು ಕಟ್ಟಿದ್ದ ಹಗ್ಗ ಹಾಗೂ ಆತ ಧರಿಸಿದ್ದ ಜರ್ಕಿನ್ ಮನೆಯಲ್ಲೇ ಬಿಟ್ಟು ಹೋಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮನೆಗೆ ನುಗ್ಗಿದ ಇಬ್ಬರು ಕಳ್ಳರಲ್ಲಿ ಒಬ್ಬ ಎತ್ತರವಾಗಿದ್ದು, ಇಬ್ಬರೂ ಮುಖಕ್ಕೆ ಸಂಪೂರ್ಣವಾಗಿ ಮಾಸ್ಕ್ ಧರಿಸಿದ್ದರು ಎಂದು ವೃದ್ದೆ ಪ್ರಭಾವತಿ ತಿಳಿಸಿದ್ದಾರೆ. ಈ ಘಟನೆ ಈ ಬಾಡಾವಣೆಯ ಜನರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.