ADVERTISEMENT

ಹಳೆ ಸೇತುವೆ ಮೇಲೆ ಪೈಪ್‌ ಲೈನ್‌: ಪುರಸಭೆಯಿಂದ ಕಾಮಗಾರಿಗೆ ತಡೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2024, 16:24 IST
Last Updated 4 ಆಗಸ್ಟ್ 2024, 16:24 IST
ಹೊಳೆನರಸೀಪುರ ಹಾಸನ ರಸ್ತೆಯಲ್ಲಿರುವ ಹೇಮಾವತಿ ಹಳೆಯ ಸೇತುವೆ ಮೇಲೆ  ಖಾಸಗಿ ಕಂಪನಿಯ ಪೈಪ್‌ ಅಳವಡಿಕೆ  ಕಾಮಗಾರಿಯನ್ನು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಪರಿಶೀಲಿಸಿ ಕೆಲಸ ನಿಲ್ಲಿಸಿದ್ದಾರೆ. 
ಹೊಳೆನರಸೀಪುರ ಹಾಸನ ರಸ್ತೆಯಲ್ಲಿರುವ ಹೇಮಾವತಿ ಹಳೆಯ ಸೇತುವೆ ಮೇಲೆ  ಖಾಸಗಿ ಕಂಪನಿಯ ಪೈಪ್‌ ಅಳವಡಿಕೆ  ಕಾಮಗಾರಿಯನ್ನು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಪರಿಶೀಲಿಸಿ ಕೆಲಸ ನಿಲ್ಲಿಸಿದ್ದಾರೆ.    


ಹೊಳೆನರಸೀಪುರ: ಹಾಸನ ರಸ್ತೆಯ ಹೇಮಾವತಿ ನದಿಯ ಹಳೆಯ ಸೇತುವೆ ಮೇಲೆ ಖಾಸಗಿ ಕಂಪನಿಯೊಂದು ಅನುಮತಿ ಪಡೆಯದೆ ಒಂದೂವರೆ ಅಡಿ ದಪ್ಪದ ಕಾಂಕ್ರಿಟ್‌ ಹಾಕಿ ಪೈಪ್‌ ಅಳವಡಿಸುತ್ತಿದ್ದುದನ್ನು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.

ಮೊದಲೇ ಸೇತುವೆ ಚಿಕ್ಕದಾಗಿದ್ದು ಈ ಗಾಗಲೇ ಸೇತುವೆ ಬಲಭಾಗದಲ್ಲಿ ಒಂದು ಅಡಿ ಒತ್ತುವರಿ ಮಾಡಿ ಪೈಪ್‌ ಅಳವಡಿಸಿದ್ದಾರೆ, ಈಗ ಮತ್ತೆ ಎಡ ಭಾಗದಲ್ಲಿ ಒಂದೂವರೆ ಅಡಿ ದಪ್ಪದ ಕಾಂಕ್ರಿಟ್‌ಹಾಕಿ ಪೈಪ್‌ ಅಳವಡಿಸುತ್ತಿದ್ದು ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಆಗುತ್ತದೆ ಎಂದು ಜನರು ಆಕ್ಷೇಪಿಸಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ಅವರಿಗೆ ದೂರು ಸಲ್ಲಿಸಿದ್ದಾರೆ.

ಮುಖ್ಯಾಧಿಕಾರಿ  ಸ್ಥಳಕ್ಕೆ ಭೇಟಿ ನೀಡಿ, ‘ ನೀವು ಯಾರಿಂದ ಅನುಮತಿ ಪಡೆದು ಪೈಪ್‌ ಅಳವಡಿಸುತ್ತಿದ್ದೀರಿ ಅನುಮತಿ ಪತ್ರ ತೋರಿಸಿ’ ಎಂದರು. ಬಳಿಕ ಪೈಪ್‌ ಅಳವಡಿಸುತ್ತಿದ್ದ ಕೆಲಸಗಾರರು, ಆಡಳಿತದ ಅನುಮತಿ ಪಡೆದಿ ಲ್ಲ ಎಂಬುದನ್ನು ದೃಢ ಪಡಿಸಿಕೊಂಡು ಕೆಲಸ ನಿಲ್ಲಿಸಲು ಸೂಚನೆ ನೀಡಿದರು.  ‘ಆಡಳಿತದ ಅನುಮತಿ ಪಡೆದು ನಿಗದಿತ ಶುಲ್ಕ ಪಾವತಿಸಿದರೆ ನಿಯಮದಂತೆ ಪೈಪ್‌ ಅಳವಡಿಸಲು ಅನುಮತಿ ನೀಡಬಹುದೇ ಎಂಬುದನ್ನು ಪರಿಶೀಲಿಸುತ್ತೇನೆ’ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.