ಕೊಣನೂರು: ‘ತಾಲ್ಲೂಕಿನಲ್ಲಿ ಯಾವ ಪಕ್ಷದಿಂದ ಸ್ಫರ್ಧಿಸಿದರೂ ಜನತೆ ನನ್ನನ್ನು ಸ್ವೀಕರಿಸಿ ತಮ್ಮ ಸೇವಕನನ್ನಾಗಿ ಮಾಡುತ್ತಿದ್ದಾರೆ’
ರುದ್ರಪಟ್ಟಣದಲ್ಲಿ ನಡೆದ ಸಂಗೀತೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಅಪ್ಪ ಮತ್ತು ಮಕ್ಕಳು ಒಂದೇ ಪಕ್ಷದಲ್ಲಿರುವುದು ಸಾಮಾನ್ಯ, ಆದರೆ, ನಾವಿಬ್ಬರು ಅಪ್ಪ ಮಕ್ಕಳು ಅಕ್ಕಪಕ್ಕದ ತಾಲ್ಲೂಕಿನಲ್ಲೇ ಬೇರೆ ಬೇರೆ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿರುವುದು ನನ್ನ ಮತ್ತು ನನ್ನ ಮಂಥರ್‌ಗೌಡರ ವಿಶೇಷತೆ’ ಎಂದು ಬೀಗಿದರು.
ರುದ್ರಪಟ್ಟಣ ಕುರಿತು ಮಾತನಾಡಿ, ‘ಇಲ್ಲಿ ಪ್ರತಿ ವರ್ಷ ನಡೆಯುವ ಸಂಗೀತೋತ್ಸವಕ್ಕೆ ಸರ್ಕಾರದ ಬಜೆಟ್‌ನಲ್ಲಿ ಕನಿಷ್ಠ ಹಣ ಮೀಸಲಿಡುವಂತೆ ಒತ್ತಾಯಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಿ ಸಂಗೀತೋತ್ಸವಕ್ಕೆ ಇನ್ನೂ ಹೆಚ್ಚಿನ ಸಹಕಾರ ನೀಡುತ್ತೇನೆ. ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮ ಹುಟ್ಟೂರು, ತಂದೆ, ತಾಯಿಯರ ಕುರಿತು ಗಮನಹರಿಸಬೇಕು’ ಎಂದರು.
‘ಸಂಗೀತ ಶಾಲೆಯೊಂದನ್ನು ತೆರೆಯುವ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ. ರುದ್ರಪಟ್ಟಣ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತೇನೆ’ ಎಂದು ಶಾಸಕ ಎ.ಮಂಜು ಭರವಸೆ ನೀಡಿದರು.
ಈ ಗ್ರಾಮದಲ್ಲಿ ಸಂಗೀತ ಶಾಲೆ ತೆರೆಯುವಂತೆ ಅಭಿಮಾನಿಯೊಬ್ಬರು ನೀಡಿದ ಮನವಿ ಕುರಿತು ಮಾತನಾಡಿ,‘ಇದನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇನೆ. ₹400 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂತ್ರಿಯಾಗಿದ್ದಾಗಲೆ ಜಾರಿಗೆ ತಂದಿದ್ದೆ. ಅದು ಈಗ ಶಾಸಕನಾಗಿರುವ ವೇಳೆ ಅನುಷ್ಠಾನವಾಗುತ್ತಿದೆ’ ಎಂದರು.
ಸಂಗೀತ ವಿದ್ವಾನ್ ಆರ್.ಕೆ.ಪದ್ಮನಾಭ್, ಸಮಾಜಸೇವಕಿ ತಾರಾ ಎ.ಮಂಜು ಮತ್ತು ಸ್ಥಳೀಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.