ADVERTISEMENT

ನನ್ನ ಬಗ್ಗೆ ಮಾತನಾಡಿದರೆ ಹಲ್ಲು ಉದುರಿಸುವೆ: ಎ.ಮಂಜು

​ಪ್ರಜಾವಾಣಿ ವಾರ್ತೆ
Published 14 ಮೇ 2023, 16:00 IST
Last Updated 14 ಮೇ 2023, 16:00 IST
ರಾಮನಾಥಪುರದ ಬಸವೇಶ್ವರ ಸರ್ಕಲ್ ನಲ್ಲಿ ಶಾಸಕ ಎ.ಮಂಜು ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.
ರಾಮನಾಥಪುರದ ಬಸವೇಶ್ವರ ಸರ್ಕಲ್ ನಲ್ಲಿ ಶಾಸಕ ಎ.ಮಂಜು ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.   

ಕೊಣನೂರು: ‘ನನ್ನ ಬಗ್ಗೆ ಇಲ್ಲಸಲ್ಲದ ಮಾತನಾಡಿದರೆ ಸಹಿಸುವುದಿಲ್ಲ, ಯಾವನಾದರೂ ನನ್ನ ಕುರಿತು ಲಘುವಾಗಿ ಮಾತನಾಡಿದರೆ ಅಂತವರ ದವಡೆ ಹಲ್ಲು ಉದುರಿಸಲಾಗುವುದು’ ಎಂದು ಶಾಸಕ ಎ.ಮಂಜು ಖಾರವಾಗಿ ಎಚ್ಚರಿಕೆ ನೀಡಿದರು.

ಶನಿವಾರ ರಾತ್ರಿ ರಾಮನಾಥಪುರ ಬಸವೇಶ್ವರ ಸರ್ಕಲ್‌‌‌ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, ‘ನನ್ನನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದು ಹೇಳಿ ಬೇರೆ ಅಭ್ಯರ್ಥಿಗಳ ಬಳಿ ಹಣ ಪಡೆದು ಕೆಲವರು ಜೀವನ ಮಾಡುತ್ತಿದ್ದಾರೆ. ಕಳೆದ 65 ವರ್ಷಗಳಿಂದ ಮರ್ಯಾದೆಯಿಂದ ಇರಬೇಕೆಂದು ತಾಳ್ಮೆಯಿಂದಿರುವ ನನ್ನನು ನೀವು ನಿಮ್ಮ ಮಾತುಗಳಿಂದ ಕೆರಳಿಸಿ ನನ್ನನ್ನು ಬದಲಾಗುವಂತೆ ಮಾಡಿದ್ದೀರಿ, ಇಂದಿನಿಂದ ನನ್ನ ಬಗ್ಗೆ ಇಲ್ಲ ಸಲ್ಲದನ್ನು ಮಾತನಾಡಿದಲ್ಲಿ ಅಂತವರಿಗೆ ತಕ್ಕ ಪಾಠ ಕಲಿಸುತ್ತೇನೆ. ದುರಂಹಕಾರದ ಮಾತುಗಳಿಗೆ ಬುದ್ಧಿ ಕಲಿಸುವ ತೀರ್ಮಾನ ತೆಗೆದುಕೊಂಡಿದ್ದೇನೆ’ ಎಂದು ತಿಳಿಸಿದರು.

‘1989ರಿಂದ ಇದುವರೆಗೂ 4 ಬಾರಿ ನನ್ನನ್ನು ಶಾಸಕನಾಗಿ ಆಯ್ಕೆಮಾಡಿದ್ದು, ಸ್ವತಂತ್ರ ಅಭ್ಯರ್ಥಿಯಾಗಿ, ಬಿಜೆಪಿಯಿಂದ, ಕಾಂಗ್ರೆಸ್‌‌‌ನಿಂದ ಮತ್ತು ಜೆಡಿಎಸ್‌‌‌ನಿಂದ ಸ್ಫರ್ಧಿಸಿದಾಗಲೂ ಸಹ ಗೆಲ್ಲಿಸಿರುವುದಕ್ಕೆ ಕ್ಷೇತ್ರದ ಜನತೆಗೆ ನಾನು ಮತ್ತು ನನ್ನ ಕುಟುಂಬ ಚಿರಯಣಿಯಾಗಿರುತ್ತೇವೆ’ ಎಂದರು.

ADVERTISEMENT

‘2023ರ ಅರಕಲಗೂಡು ಕ್ಷೇತ್ರದ ಚುನಾವಣೆಯು ಹಣ ಬಲ ಮತ್ತು ಜನ ಬಲದ ಚುನಾವಣೆಯಾಗಿತ್ತು. ನನಗೆ ಹೆಚ್ಚು ಶಕ್ತಿಯನ್ನು ತಂದುಕೊಟ್ಟ ಚುನಾವಣೆಯಾಗಿದೆ. ಪಕ್ಷೇತರ ಅಭ್ಯರ್ಥಿಯ ಜಲ್ಲಿ ಅಥವಾ ಮರಳಿನ ದುಡ್ಡು ಜನಗಳ ಶಕ್ತಿಯ ಮುಂದೆ ಕೆಲಸ ಮಾಡಲಿಲ್ಲ. ಪಕ್ಷೇತರ ಅಭ್ಯರ್ಥಿಯ ಬಳಿ ಕೆಲ ನಾಯಕರು ಚುನಾವಣೆ ಮಾಡುತ್ತೇವೆಂದು ಅವರ ಬೇಳೆ ಬೇಯಿಸಿಕೊಳ್ಳಲು ಹಣ ಪಡೆದು ಅವರ ಮನೆ ಹಾಳು ಮಾಡಿದ್ದಾರೆ. ಅದರಲ್ಲೂ ರಾಮನಾಥಪುರ ಹೋಬಳಿ ಹೆಸರನ್ನು ಹೇಳಿ ಹೆಚ್ಚು ಹಣ ಪಡೆದಿರುವ ನಿಮ್ಮ ಮನೆ ಹಾಳಾಗುತ್ತದೆ’ ಎಂದರು.

ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಸ್ಥಳಿಯರು ವಿವಿಧ ಗ್ರಾಮಗಳಿಂದ ಬಂದಿದ್ದ ಅಭಿಮಾನಿಗಳು ಮತ್ತು ಕಾರ್ಯಕರ್ತರಿದ್ದರು.

ರಾಮನಾಥಪುರದ ಬಸವೇಶ್ವರ ಸರ್ಕಲ್ ನಲ್ಲಿ ಶಾಸಕ ಎ.ಮಂಜು ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.