ಹೊಳೆನರಸೀಪುರ: ರಾಜ್ಯದ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿಜಾರಿಗೊಳಿಸುವ ಉದ್ದೇಶದಿಂದ ಜೆಡಿಎಸ್ ಹಮ್ಮಿಕೊಂಡಿರುವ ಜನತಾಜಲಧಾರೆ ಯಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು.
ತಾಲ್ಲೂಕಿನ ಶ್ರೀರಾಮದೇವರ ಕಟ್ಟೆಯಲ್ಲಿ ಶೃಂಗೇರಿಯ ಶಾರದಾಂಬೆಗೆಶಾಸಕರಾದ ಎಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ ವಿಶೇಷಪೂಜೆ ಸಲ್ಲಿಸಿ, ಹೇಮಾವತಿ ನೀರನ್ನು ಕಳಶದಲ್ಲಿ ತುಂಬಿ ಗಂಗಾ ರಥದಲ್ಲಿಇರಿಸಲಾಯಿತು.
ಅಲ್ಲಿಂದ ಅರಕಲಗೂಡಿನತ್ತ ಜಲಧಾರೆ ಯಾತ್ರೆ ಹೊರಟಿತು. ಸಾವಿರಾರು ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡರು. ಕಾರ್ಯಕ್ರಮದ ಅಂಗವಾಗಿ ಪೂರ್ಣಕುಂಭ ಹೊತ್ತ ಮಹಿಳೆಯರು, ಡೊಳ್ಳುಕುಣಿತ ಮೆರವಣಿಗೆ ನಡೆಯಿತು.
ನಂತರ ಮಾತನಾಡಿದ ರೇವಣ್ಣ, ‘ನೂರಾರು ವರ್ಷಗಳ ಇತಿಹಾಸವಿರುವಶ್ರೀರಾಮದೇವರ ಅಣೆಕಟ್ಟೆ ಜೀರ್ಣೋದ್ಧಾರ ಮಾಡಲಾಗುತ್ತಿದೆ. ರಾಜ್ಯದ 15 ಕಡೆಗಳಿಂದ ಯಾತ್ರೆ ಬರುತ್ತಿದೆ. ದೇವೇಗೌಡರು ನೀರಾವರಿ ಸಚಿವರಾಗಿ,
ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ನೀರಾವರಿ ಕ್ಷೇತ್ರಕ್ಕೆ ದೊಡ್ಡ ಕಾಣಿಕೆನೀಡಿದ್ದಾರೆ. ಜಿಲ್ಲೆಯಲ್ಲಿ ಹೇಮಾವತಿ, ಯಗಚಿ ಕಟ್ಟಿಸಿದ್ದು ದೇವೇಗೌಡರು’ ಎಂದುನುಡಿದರು.
‘ಐದು ದಶಕ ರಾಜ್ಯ ಆಳಿದ ಕಾಂಗ್ರೆಸ್ ಮುಸ್ಲಿಮರಿಗೆ ಮೀಸಲಾತಿಕೊಟ್ಟಿದೆಯೇ? ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಯಾವಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ? ನಾವೇನು ಹಿಂಬಾಗಿಲಿನಿಂದ ಬಂದಿಲ್ಲ. ನನ್ನ ಜೀವ ಇರುವವರೆಗೂ ಜಿಲ್ಲೆಯ ಜನರ ಋಣ ತೀರಿಸುವೆ’ ಎಂದರು.
‘ರಾಜ್ಯದ ಎಲ್ಲ ನೀರಾವರಿ ಯೋಜನೆಗಳು ಪೂರ್ಣಗೊಂಡು ರಾಜ್ಯ ಸಂಪೂರ್ಣಅಭಿವೃದ್ಧಿ ಕಾಣಬೇಕೆಂದರೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು.ಕಾಂಗ್ರೆಸ್‌ನವರು ಬಳ್ಳಾರಿ ಪಾದಯಾತ್ರೆ ಮಾಡಿದ್ದರು. ಈಗ ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.
ಮಾಜಿ ಸಚಿವ ಡಿ. ನಾಗರಾಜಯ್ಯ ಮಾತನಾಡಿ, ‘ದೇವೇಗೌಡರ ಕುಟುಂಬದವರುರಾಜ್ಯದ ಹಿತಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸಲು ಯಾರಿಗೂ ಸಾಧ್ಯ ಇಲ್ಲ. ಆದ್ದರಿಂದ ಜೆಡಿಎಸ್
ಪಕ್ಷಕ್ಕೆ ದೇವೇಗೌಡರ ಕುಟುಂಬದವರೇ ಸಾರಥ್ಯ ವಹಿಸಿದಲ್ಲಿ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ’ ಎಂದು ಪ್ರತಿಪಾದಿಸಿದರು.
ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ,ಮಾಜಿ ಶಾಸಕ ನಂಜೇಗೌಡ ಮಾತನಾಡಿದರು. ವಿಧಾನ
ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಗುಬ್ಬಿ ನಾಗರಾಜು, ಉದ್ಯಮಿ ಎನ್.ಆರ್. ಅನಂತ್‍ಕುಮಾರ್, ಕೆ.ಎಂ.ಜಿ. ಕುಮಾರ್, ಎಚ್.ಎನ್. ದೇವೇಗೌಡ, ಹಾಸನ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ಚನ್ನರಾಯಪಟ್ಟಣ ತಾಲ್ಲೂಕು ಘಟಕದ ಅಧ್ಯಕ್ಷ ಪರಮ ದೇವರಾಜೇಗೌಡ, ಪಾಪಣ್ಣಿ,ದೊಡ್ಡಮಲ್ಲೇಗೌಡ, ಮುತ್ತಿಗೆ ರಾಜೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.