ADVERTISEMENT

ಹಾಸನ | ನ.18 ರವರೆಗೆ ಆಭರಣ ಪ್ರದರ್ಶನ– ಮಾರಾಟ

ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಆಯೋಜನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 13:06 IST
Last Updated 15 ನವೆಂಬರ್ 2024, 13:06 IST
ಹಾಸನದ ಅಶೋಕ ಹೋಟೆಲ್‌ನಲ್ಲಿ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ವತಿಯಿಂದ ಆಯೋಜಿಸಿರುವ ಆಭರಣ ಪ್ರದರ್ಶನ ಹಾಗೂ ಮಾರಾಟವನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ ವೀಕ್ಷಿಸಿದರು.
ಹಾಸನದ ಅಶೋಕ ಹೋಟೆಲ್‌ನಲ್ಲಿ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ವತಿಯಿಂದ ಆಯೋಜಿಸಿರುವ ಆಭರಣ ಪ್ರದರ್ಶನ ಹಾಗೂ ಮಾರಾಟವನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ ವೀಕ್ಷಿಸಿದರು.   

ಹಾಸನ: ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ವತಿಯಿಂದ ನಗರದ ಅಶೋಕ ಹೋಟೆಲ್‌ನಲ್ಲಿ ಆಭರಣ ಪ್ರದರ್ಶನ ಹಾಗೂ ಮಾರಾಟವನ್ನು ನ.15 ರಿಂದ 18 ರವರೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಕೆ.ಕೆ. ಪ್ರಸಾದ್ ತಿಳಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಂಪ್ರದಾಯಿಕ ಮತ್ತು ಸಮಕಾಲೀನ ಆಭರಣಗಳ ಸಂಗ್ರಹದ ವಿಶಿಷ್ಟ ಶ್ರೇಣಿಯೊಂದಿಗೆ, ಶುದ್ಧ ಚಿನ್ನ ಮತ್ತು ರತ್ನಗಳು ಹಾಗೂ ಅತ್ಯುತ್ತಮ ಕರಕುಶಲತೆಯೊಂದಿಗೆ ಸಿದ್ಧಪಡಿಸಲಾದ ಆಭರಣಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ ಎಂದರು.

ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ನ ಆಭರಣದ ಸಂಗ್ರಹಗಳು, ವೈಢೂರ್ಯ, ಸಿಟ್ರಿನ್, ಮುತ್ತುಗಳು, ಹರಳು, ಮಾಣಿಕ್ಯಗಳಂತಹ ಅಪರೂಪವಾದ ವಜ್ರಗಳೊಂದಿಗೆ ಆಕರ್ಷಕ ವಿನ್ಯಾಸ ಹೊಂದಿವೆ. ಈ ಮೂಲಕ ಸೊಬಗು ಮತ್ತು ಕ್ಲಾಸಿಕ್ ಶೈಲಿಯನ್ನು ತಂದುಕೊಡಲಿವೆ. ಬೆಳ್ಳಿ ಆಭರಣಗಳು ₹599 ರಿಂದ ಆರಂಭ ಆಗಲಿವೆ ಎಂದರು.

ADVERTISEMENT

ಸಿಕೆಸಿಯಿಂದ ಪರಿಚಯಿಸಲಾಗಿರುವ ಕ್ರ್ಯಾಶ್‌.ಕ್ಲಬ್‌ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬೆಳ್ಳಿ ಆಭರಣಗಳ ಫ್ಯಾಶನ್ ಬ್ರ್ಯಾಂಡ್ ಆಗಿದೆ. ಇದು ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್‌ನ ಕಾರ್ಯಕಾರಿ ನಿರ್ದೇಶಕ ಚೈತನ್ಯ ವಿ.ಕೋಥಾ ಅವರ ಕನಸಿಕ ಕಲ್ಪನೆ. ಕೈಗೆಟುಕುವ ಮತ್ತು ಸೊಗಸಾದ ಬೆಳ್ಳಿ ಆಭರಣಗಳನ್ನು ಗ್ರಾಹಕರಿಗೆ ನೀಡುವುದಾಗಿದೆ ಎಂದರು.

ಹಾಸನದ ಕೀರ್ತಿಯನ್ನು ಹೆಚ್ಚಿಸಿರುವ ಹೊಯ್ಸಳ ಅಸೆಂಬ್ಲೇಜ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ಇಲ್ಲಿ ಸೊಬಗು ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗಳು ಸಮ್ಮಿಳತವಾಗಿವೆ. ಹಳೇಬೀಡಿನಲ್ಲಿರುವ ಹೊಯ್ಸಳೇಶ್ವರ ದೇವಾಲಯ ಮತ್ತು ಬೇಲೂರಿನ ಚೆನ್ನಕೇಶವ ದೇವಾಲಯದ ವಾಸ್ತುಶಿಲ್ಪದ ಅದ್ಭುತಗಳಿಂದ ಪ್ರೇರೇಪಿತವಾಗಿದೆ. ಇಲ್ಲಿ‌ನ ಕಲಾಕೃತಿ ಮಾದರಿ ಆಭರಣ ನಮ್ಮಲ್ಲಿ ದೊರೆಯಲಿವೆ ಎಂದರು.

ಈ ಸಂಗ್ರಹದ ಸಂಪೂರ್ಣ ಮಾಹಿತಿಗೆ https://www.ckcjewellers.com/ckc/search/hoysala ಇಲ್ಲಿಗೆ ಭೇಟಿ ನೀಡಬಹುದು. ಆಭರಣ ಸಂಗ್ರಹ ಮತ್ತು ಪ್ರದರ್ಶನದ ಬಗೆಗಿನ ಮಾಹಿತಿಗೆ ಪ್ರಸಾದ್ ಕೆ.ಕೆ. (9740018415) ಮತ್ತು ಸೈಯದ್ (9108178103) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಆಭರಣಗಳ ಪ್ರದರ್ಶನವನ್ನು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.