ಹಾಸನ: ಕಡೆಗೂ ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ ಘೋಷಣೆಯಾಗಿದ್ದು, ಪ್ರಬಲ ಆಕಾಂಕ್ಷಿಯಾಗಿದ್ದ ಸ್ವರೂಪ್‌ಗೆ ಟಿಕೆಟ್ ನೀಡಲಾಗಿದೆ. ಸ್ವರೂಪ್ ಮನೆ ಎದುರು ಅಭಿಮಾನಿಗಳ ಸಂಭ್ರಮಾಚರಣೆ ಮಾಡುತ್ತಿದ್ದು, ಸಿಹಿ ಹಂಚಿ ಸಂಭ್ರಮಿಸಿದರು.
ಮೂರು ತಿಂಗಳಿಂದ ಭವಾನಿ ರೇವಣ್ಣ ಮತ್ತು ಸ್ವರೂಪ್ ನಡುವೆ ನಡೆದಿದ್ದ ಹಗ್ಗ ಜಗ್ಗಾಟಕ್ಕೆ ತೆರೆ ಬಿದ್ದಿದ್ದು, ಟಿಕೆಟ್ ಸಿಕ್ಕಿರುವ ಬಗ್ಗೆ ಸ್ವರೂಪ್ ಸಂತಸ ವ್ಯಕ್ತಪಡಿಸಿದ್ದಾರೆ.
‘ರೇವಣ್ಣ ಸಾಹೇಬ್ರು, ಭವಾನಿ ಮೇಡಂ ಎಲ್ಲರ ಸಹಕಾರದಿಂದ ಚುನಾವಣೆ ಗೆಲ್ಲುವ ವಿಶ್ವಾಸವಿದೆ. ನಿರೀಕ್ಷೆಯಂತೆಯೇ ಟಿಕೆಟ್ ಸಿಕ್ಕಿದೆ: ಇದರಿಂದ ಸಂತೋಷವಾಗಿದೆ. ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ನೂರಕ್ಕೆ ನೂರರಷ್ಟು ಗೆಲ್ಲಲಿದೆ. ದೇವೇಗೌಡರು, ರೇವಣ್ಣ ಸಾಹೇಬ್ರು, ಕುಮಾರಣ್ಣ ಅವರಿಗೆ ಋಣಿಯಾಗಿರುವೆ’ ಎಂದು ಸ್ವರೂಪ್ ಹೇಳಿದರು.
ಸುದ್ದಿಗಾರರ ಜೊತೆಗೆ ಮಾತನಾಡಿದ ಸ್ವರೂಪ್ ಅವರ ತಾಯಿ ಲಲಿತಾ ಪ್ರಕಾಶ್, ‘ಸ್ವರೂಪ್‌ಗೆ ಟಿಕೆಟ್ ನೀಡುವ ಮೂಲಕ ಕುಮಾರಸ್ವಾಮಿ, ರೇವಣ್ಣ ಅವರು ನುಡಿದಂತೆ ನಡೆದಿದ್ದಾರೆ. ತಬ್ಬಲಿ ಮಗನನ್ನು ಕೈಹಿಡಿದಿದ್ದಾರೆ. ಸ್ವರೂಪ್ ಕೂಡ ತಮ್ಮ ತಂದೆ ದಿ. ಎಚ್.ಎಸ್. ಪ್ರಕಾಶ್ ಅವರಂತೆ ಉತ್ತಮ ಕೆಲಸ ಮಾಡುತ್ತಾರೆ. ಮಗನನ್ನು ಗೆಲ್ಲಿಸುವಂತೆ ಮತದಾರರಲ್ಲೂ ಮನವಿ ಮಾಡುತ್ತೇನೆ’ ಎಂದು ಹೇಳಿದರು.
ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.