ADVERTISEMENT

ಭೂಕುಸಿತ: ಬೆಂಗಳೂರು–ಮಂಗಳೂರು ರೈಲು ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 20:17 IST
Last Updated 18 ಆಗಸ್ಟ್ 2024, 20:17 IST
   

ಹಾಸನ: ಸಕಲೇಶಪುರ–ಬಾಳ್ಳುಪೇಟೆ ನಡುವಿನ ಆಚಂಗಿ ಬಳಿ ಹಳಿಗಳ ಮೇಲೆ ಭೂಕುಸಿತ ಸಂಭವಿಸಿದ್ದು, ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ರೈಲುಗಳನ್ನು ರದ್ದುಪಡಿಸಲಾಗಿದೆ.

ಆ.18 ಹಾಗೂ 19ರಂದು ಸಂಚರಿಸಬೇಕಿದ್ದ ಮುರ್ಡೇಶ್ವರ–ಎಸ್ಎಂವಿಟಿ ಬೆಂಗಳೂರು, ಎಸ್‌ಎಂವಿಟಿ ಬೆಂಗಳೂರು–ಮುರ್ಡೇಶ್ವರ, ಕೆಎಸ್‌ಆರ್‌ ಬೆಂಗಳೂರು– ಕಾರವಾರ, ಕಾರವಾರ ಕೆಎಸ್‌ಆರ್‌ ಬೆಂಗಳೂರು, ಕೆಎಸ್‌ಆರ್‌ ಬೆಂಗಳೂರು–ಕಣ್ಣೂರು, ಕಣ್ಣೂರು–ಕೆಎಸ್‌ಆರ್‌ ಬೆಂಗಳೂರು, ವಿಜಯಪುರ–ಮಂಗಳೂರು ಸೆಂಟ್ರಲ್‌ ರೈಲುಗಳನ್ನು ರದ್ದುಪಡಿಸಲಾಗಿದೆ.

ಆ.19ರಂದು ಸಂಚರಿಸಲಿದ್ದ ಯಶವಂತಪುರ–ಕಾರವಾರ, ಆ.20ರಂದು ಸಂಚರಿಸಬೇಕಿದ್ದ ಕಾರವಾರ–ಯಶವಂತಪುರ, ಆ.19 ಹಾಗೂ 20ರಂದು ನಿಗದಿಯಾಗಿದ್ದ ಮಂಗಳೂರು ಸೆಂಟ್ರಲ್‌–ವಿಜಯಪುರ ರೈಲುಗಳ ಸಂಚಾರ ರದ್ದಾಗಿದೆ. ಮಣ್ಣು ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಕಾಮಗಾರಿ ಪೂರ್ಣಗೊಂಡ ನಂತರ ರೈಲು ಸಂಚಾರ ಆರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.