ಹಾಸನ: ರಿಷಬ್ ಶೆಟ್ಟಿ ನಿರ್ಮಾಣದ ಬಹುನಿರೀಕ್ಷಿತ ಚಿತ್ರ ‘ಲಾಫಿಂಗ್ ಬುದ್ಧ’ ಆಗಸ್ಟ್ 30ರಂದು ತೆರೆ ಕಾಣಲಿದೆ ಎಂದು ನಾಯಕ ನಟ ಪ್ರಮೋದ್ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಿತ್ರದ ಮೂಲಕ ನಾಯಕ ನಟನಾಗಿ ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದು, ಭರತ್ ರಾಜ್ ನಿರ್ದೇಶನ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ನಡೆದ ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಕಥೆ ಇದಾಗಿದ್ದು, ದಿಗಂತ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗೋವರ್ಧನ್ ಎಂಬ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಪಾತ್ರದಲ್ಲಿ ನಾನು ನಟಿಸಿದ್ದೇನೆ. ಪೊಲೀಸರ ವೈಯಕ್ತಿಕ ಹೋರಾಟಗಳು ಮತ್ತು ಅವರ ಜೀವನದಲ್ಲಿ ಉಂಟಾಗುವ ಪರಿಣಾಮಗಳ ಬಗ್ಗೆ ಚಿತ್ರದಲ್ಲಿ ತಿಳಿಸಲಾಗಿದೆ ಎಂದರು.
ಹಾಸ್ಯ ಭರಿತ ಚಿತ್ರ ಇದಾಗಿದ್ದು, ಮನರಂಜನೆಗೆ ಪೂರಕವಾದ ಸನ್ನಿವೇಶಗಳನ್ನು ಚಿತ್ರ ಒಳಗೊಂಡಿದೆ. ಹಲವಾರು ಹಿರಿಯ ನಟರು ನಟಿಸಿದ್ದಾರೆ. ರಿಷಬ್ ಶೆಟ್ಟಿ ಫಿಲಂಸ್ ಅಡಿ ಈ ಚಿತ್ರವನ್ನು ಹೊರತರಲಾಗಿದ್ದು, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಮಾದರಿಯಲ್ಲಿಯೇ ಚಿತ್ರವು ಮೂಡಿಬಂದಿದೆ ಎಂದು ವಿವರಿಸಿದರು.
ನಟರಾದ ಸೃಜನೀತ್ ಶೆಟ್ಟಿ, ದೀಪಕ್ ರಾಜ್, ಶ್ಯಾಂ ಸುಂದರ್, ಸ್ನೇಹಶ್ರೀ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.