ಹೊಳೆನರಸೀಪುರ: ಪಟ್ಟಣ ಪುರಸಭೆ ವ್ಯಾಪ್ತಿಯ ಆಶ್ರಯ ಬಡಾವಣೆಯಲ್ಲಿ ಶನಿವಾರ ಒಳಚರಂಡಿಯಮ್ಯಾನ್‌ಹೋಲ್‍ಗೆ ದಿನಗೂಲಿ ಪೌರಕಾರ್ಮಿಕರೊಬ್ಬರನ್ನು ಇಳಿಸಿ ಸ್ವಚ್ಛ ಮಾಡಿಸಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಮ್ಯಾನ್‌ಹೋಲ್ ಸ್ವಚ್ಛಗೊಳಿಸುತ್ತಿರುವ ಫೋಟೊವನ್ನು ವ್ಯಕ್ತಿಯೊಬ್ಬರು ತೆಗೆದಿದ್ದಾರೆ. ಶೌಚಗುಂಡಿಗೆ ಕಾರ್ಮಿಕರನ್ನು ಇಳಿಸಿರುವ ವಿಚಾರ ಗೊತ್ತಾಗುತ್ತಿದ್ದಂತೆ ಹಲವರು ಆಕ್ರೋಶ ಹೊರಹಾಕಿ, ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ತಹಶೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ‘ಶೌಚಗುಂಡಿಗೆ ಇಳಿಸಿ ಕೆಲಸ ಮಾಡಿಸುವಂತಿಲ್ಲ. ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ, ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇವೆ. ಶೌಚಗುಂಡಿಗೆ ಇಳಿದ ದಿನಗೂಲಿ ಪೌರ ಕಾರ್ಮಿಕನ ಹಿತಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತೇವೆ’ ಎಂದರು.
ಪುರಸಭೆ ಅಧಿಕಾರಿಗಳು ಈಚೆಗೆ ವಿಮೆ ಮಾಡಿಸದ ವಾಹನವನ್ನು ರಸ್ತೆಗೆ ಇಳಿಸಿದ್ದರು. ಆ ವಾಹನ ಅಪಘಾತವಾಗಿ ವ್ಯಾನಿನಲ್ಲಿದ್ದ ಇಬ್ಬರು ಕಾರ್ಮಿಕರು ಮೃತಪಟ್ಟು ಅವರಿಗೆ ಪರಿಹಾರ ದೊರಕುವ ಅವಕಾಶ ತಪ್ಪಿತ್ತು. ಈಗ ಪುರಸಭೆ ಅಧಿಕಾರಿಗಳು ಮತ್ತೊಂದು ಎಡವಟ್ಟು ಎಸಗಿ, ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.