ADVERTISEMENT

ಸಾಮೂಹಿಕ ವಿವಾಹ, ಹಿರಿಯ ದಂಪತಿಗೆ ಸನ್ಮಾನ

ಕಬ್ಬಳಿಯ ಬಸವೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಆಯೋಜನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 12:53 IST
Last Updated 13 ನವೆಂಬರ್ 2024, 12:53 IST
ಹಿರೀಸಾವೆ ಹೋಬಳಿಯ ಕಬ್ಬಳಿ ಬಸವೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಬುಧವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವದಂಪತಿಗೆ ಶಂಭುನಾಥ ಸ್ವಾಮೀಜಿ ಪ್ರತಿಜ್ಞಾವಿಧಿ ಬೋಧಿಸಿದರು. ಗುಣನಾಥ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ದಾನಿಗಳಾದ ಪ್ರದೀಪಾ ವೆಂಕಟೇಶ ಪ್ರಸಾದ್ ಭಾಗವಹಿಸಿದ್ದರು
ಹಿರೀಸಾವೆ ಹೋಬಳಿಯ ಕಬ್ಬಳಿ ಬಸವೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಬುಧವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವದಂಪತಿಗೆ ಶಂಭುನಾಥ ಸ್ವಾಮೀಜಿ ಪ್ರತಿಜ್ಞಾವಿಧಿ ಬೋಧಿಸಿದರು. ಗುಣನಾಥ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ದಾನಿಗಳಾದ ಪ್ರದೀಪಾ ವೆಂಕಟೇಶ ಪ್ರಸಾದ್ ಭಾಗವಹಿಸಿದ್ದರು   

ಹಿರೀಸಾವೆ: ‘ದಂಪತಿಗಳು ಪರಸ್ಪರ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ಮುಂದಿನ ಪೀಳಿಗೆಗೆ ದಾರಿದೀಪ ಆಗಬೇಕು’ ಎಂದು ಆದಿಚುಂಚನಗಿರಿ ಹಾಸನ–ಕೊಡಗು ಮಠದ ಕಾರ್ಯದರ್ಶಿ ಶಂಭುನಾಥ ಸ್ವಾಮೀಜಿ ಹೇಳಿದರು.

ಹೋಬಳಿಯ ಕಬ್ಬಳಿ ಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಯುಕ್ತ ಬುಧವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು–ವರರನ್ನು ಆಶೀರ್ವದಿಸಿ ಅವರು ಮಾತನಾಡಿದರು.

‘ನಾನು ಮೇಲು, ನೀನು ಕೀಳು ಎಂಬ ಭಾವನೆ ಬಿಟ್ಟು, ಕುಟುಂಬದಲ್ಲಿ ಬರುವ ಸಮಸ್ಯೆಗಳನ್ನು, ಮಾತನಾಡುವ ಮೂಲಕ ಬಗೆಹರಿಸಿಕೊಳ್ಳಬೇಕು. ಮನುಷ್ಯ ಬದುಕಿದ್ದಾಗ, ದಾನ ಧರ್ಮ ಮಾಡಿದರೆ, ಅಂತ್ಯಕಾಲದಲ್ಲಿ ಪಾಪ, ಪುಣ್ಯವನ್ನು ತೆಗೆದುಕೊಂಡು ಹೋಗುಬಹುದು. ಮನೆಯಲ್ಲಿ ಇರವ ಹಿರಿಯರನ್ನು ಗೌರವದಿಂದ ಕಾಣಬೇಕು, ಯಾವ ಮನೆಯಲ್ಲಿ ತಂದೆ, ತಾಯಿ ನೆಲೆಸಿರುತ್ತಾರೋ, ಆ ಮನೆಯಲ್ಲಿ ದೇವರು ಇದ್ದಂತೆ. ಹಿರಿಯ ದಂಪತಿಗಳಿಗೆ ಅಭಿನಂದನೆ ಮಾಡುವುದು ಉತ್ತಮ ಕಾರ್ಯ. ಆದಿಚುಂಚನಗಿರಿ ಮಠವು ಈ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ’ ಎಂದರು.

ADVERTISEMENT

ಆದಿಚುಂಚನಗಿರಿ ಶಾಖಾ ಮಠಗಳ ಗುಣನಾಥ ಸ್ವಾಮೀಜಿ, ಚಂದ್ರಶೇಖರನಾಥ ಸ್ವಾಮೀಜಿ, ಕಬ್ಬಳಿ ಮಠದ ಶಿವಪುತ್ರನಾಥ ಸ್ವಾಮೀಜಿ, ಸಾಮೂಹಿಕ ವಿವಾಹದ ನೇತೃತ್ವ ವಹಿಸಿದ್ದ ಪ್ರದೀಪಾ ವೇಂಕಟೇಶ್ ಪ್ರಸಾದ್, ವಿಧಾನ ಪರಿಷತ್ ಮಾಜಿ ಸದಸ್ಯ ಗೋಪಾಲಸ್ವಾಮಿ, ಪರಿಸರ ಪ್ರೇಮಿ ಚ.ನಂ. ಅಶೋಕ್, ಹಾಸನ ಹಾಲು ಒಕ್ಕೂಟದ ಎಂ.ಡಿ. ಗೋಪಾಲಯ್ಯ, ಮುಖ್ಯಶಿಕ್ಷಕ ತಿಮ್ಮೇಗೌಡ, ಗ್ರಾಮದ ಮುಖಂಡರಾದ ಗುಡಿಗೌಡ ಪ್ರಕಾಶ್ ಶಿವನಂಜೇಗೌಡ, ಗಣೇಶ್ ಗೌಡ, ಸಿದ್ದಗಂಗಾಧರಗೌಡ, ನಿವೃತ್ತ ಪ್ರಾಂಶುಪಾಲ ತಮ್ಮಣ್ಣಗೌಡ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ನೌಕರರು ಇದ್ದರು.

ಬೆಳಿಗ್ಗೆ ಬಸವೇಶ್ವರಸ್ವಾಮಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ನಂತರ ದೇವಸ್ಥಾನದ ಮುಂಭಾಗದಲ್ಲಿ ಸಾಮೂಹಿಕ ವಿವಾಹ ನಡೆಯಿತು. ನೂತನ ದಂಪತಿಗಳಿಗೆ ಸ್ವಾಮೀಜಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು ಹಾಗೂ ಹಿರಿಯ ದಂಪತಿಗಳನ್ನು ಸನ್ಮಾನಿಸಲಾಯಿತು. ಭಕ್ತರು ದೇವರ ಉತ್ಸವ ನಡೆಸಿದರು.

ಹಿರೀಸಾವೆ ಹೋಬಳಿಯ ಕಬ್ಬಳಿ ಬಸವೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಬುಧವಾರ 18 ಹಿರಿಯ ದಂಪತಿಯನ್ನು ಅಭಿನಂದಿಸಲಾಯಿತು. ಶಂಭುನಾಥ ಸ್ವಾಮೀಜಿ ಕಬ್ಬಳಿ ಮಠದ ಶಿಪುತ್ರನಾಥ ಸ್ವಾಮೀಜಿ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.