ADVERTISEMENT

ಹೊಳೆನರಸೀಪುರ: ರಸ್ತೆ, ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಎ.ಮಂಜು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2024, 13:43 IST
Last Updated 25 ಫೆಬ್ರುವರಿ 2024, 13:43 IST
ಹೊಳೆನರಸಿಪುರ ತಾಲ್ಲೂಕಿನ ಹಳ್ಳಿಮೈಸೂರು ಹಾಗು ಚೋಳೇನಹಳ್ಳಿ ಗ್ರಾಮದಲ್ಲಿ ಶಾಸಕ ಎ. ಮಂಜು ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ನಡೆಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಶ್ವನಾಥ್, ಮಾಜಿ ಅಧ್ಯಕ್ಷ ಬಾಲಗಂಗಾಧರ್, ಮಂಗಳವಾಡಿ ಬಾಬು, ನೀರಾವರಿ ಇಲಾಖೆಯ ಎಇಇ ವಿಜಯಕುಮಾರ್, ಎಂಜಿನಿಯರ್ ಮಂಜುಪ್ರಸಾದ್ ಪಾಲ್ಗೊಂಡಿದ್ದರು

ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಯ ಚೋಳೇನಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯ ಸುತ್ತ ಕಾಂಕ್ರೀಟ್ ಹಾಗೂ ₹20 ಲಕ್ಷ ವೆಚ್ಚದ ಊರಿನ ರಸ್ತೆಯ ಕಾಂಕ್ರೀಟ್ ಕಾಮಗಾರಿಕೆ ಅರಕಲಗೂಡು ಶಾಸಕ ಎ. ಮಂಜು ಭಾನುವಾರ ಭೂಮಿಪೂಜೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಹೊನ್ನಾಳಮ್ಮ ಕಪ್ಪಲು ರಸ್ತೆ ಅಭಿವೃದ್ಧಿ, ₹ 55 ಲಕ್ಷ ವೆಚ್ಚದಲ್ಲಿ ಗೊರಗುಂಡಿ ರಸ್ತೆ ಹಾಗೂ ಚರಂಡಿ ಕಾಮಗಾರಿ, ₹20 ಲಕ್ಷ ವೆಚ್ಚದಲ್ಲಿ ದಾಸೇಗೌಡನ ಕೊಪ್ಪಲಿನ ಚರಂಡಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದರು. ನಂತರ ₹20 ಲಕ್ಷ ವೆಚ್ಚದಲ್ಲಿ ಹಳ್ಳಿಮೈಸೂರಿನ ಕೆಲವು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನಡೆಸಿದರು.

ಈ ಎಲ್ಲಾ ಕಾಮಗಾರಿಗಳು ನಿಗದಿತ ಸಮಯದಲ್ಲಿ ಮುಗಿಯಬೇಕು. ಕೆಲಸ ಉತ್ತಮ ಗುಣಮಟ್ಟದಲ್ಲಿ ನಡೆಯುವಂತೆ ನೋಡಿಕೊಳ್ಳಿ ಎಂದು ನೀರಾವರಿ ಇಲಾಖೆಯ ಎಇಇ ವಿಜಯಕುಮಾರ್, ಎಂಜಿನಿಯರ್ ಮಂಜು ಪ್ರಸಾದ್‍ಗೆ ಸೂಚಿಸಿದರು.

ADVERTISEMENT

ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಶ್ವನಾಥ್, ಮಾಜಿ ಅಧ್ಯಕ್ಷ ಬಾಲಗಂಗಾಧರ್, ಮತ್ತೊಬ್ಬ ಮಾಜಿ ಅಧ್ಯಕ್ಷ ಮಂಗಳವಾಡಿ ಬಾಬು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.