ಬೇಲೂರು: ತಾಲ್ಲೂಕಿನ ನಂಜಗೋಡನಹಳ್ಳಿ ಗ್ರಾಮದ ಪ್ರದೀಪ್ ಅವರ ಕಾಫಿ ತೋಟದಲ್ಲಿ ಮಂಗವೊಂದು ಸಾವನ್ನಪ್ಪಿದ್ದು ಇದು ಜನರು ಆತಂಕಗೊಂಡಿದ್ದು, ಮಂಗನ ಕಾಯಿಲೆಯಿಂದ ಸಾವನ್ನಪ್ಪಿರಬಹುದೇ ಎಂಬ ಶಂಕೆ ಮೂಡಿದೆ.
ಮಂಗ ಸಾವನ್ನಪ್ಪಿದ ವಿಚಾರ ತಿಳಿದ ಆರೋಗ್ಯ ಇಲಾಖೆ ಮತ್ತು ಪಶು ವೈದ್ಯಕೀಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಬಂದು ಮರಣೋತ್ತರ ಪರೀಕ್ಷೆ ನಡೆಸಿ ಅದರ ಅಂಗಾಂಗಳನ್ನು ಪಡೆದು ಮಂಗನನ್ನು ಸುಟ್ಟು ಹಾಕಿದ್ದಾರೆ.
ಮಂಗ ಮೃತಪಟ್ಟ ಸ್ಥಳದಿಂದ 50 ಮೀ. ಸುತ್ತಳತೆಯಲ್ಲಿ ರೋಗ ಹರಡದಂತೆ ಮೆಲಾಥಿನ್ ದ್ರಾವಣವನ್ನು ಸಿಂಪಡಿಸಲಾಗಿದೆ. ಜನರಿಗೆ ಅಗತ್ಯ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ವೈದ್ಯಾಧಿಕಾರಿ ಮಮತಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.