ADVERTISEMENT

ಹಣ ಕೊಡದಿದ್ದಕ್ಕೆ ತಾಯಿಯ ಮೇಲೆ ಹಲ್ಲೆ: ಸಾವು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2024, 14:27 IST
Last Updated 5 ನವೆಂಬರ್ 2024, 14:27 IST
ಭರತ್
ಭರತ್   

ಕೊಣನೂರು: ರಾಮನಾಥಪುರ ಹೋಬಳಿಯ ಮಧುರನಹಳ್ಳಿಯಲ್ಲಿ ಕುಡಿಯಲು ಹಣ ಕೊಡದಿದ್ದಕ್ಕೆ ಮಗನಿಂದಲೇ ಹಲ್ಲೆಗೊಳಗಾಗಿದ್ದ ತಾಯಿ ಚಿಕ್ಕಮ್ಮ (61) ಮೃತಪಟ್ಟಿದ್ದಾರೆ.

ಗ್ರಾಮದ ಈರಯ್ಯ ಎಂಬುವವರ ಮಗ ಭರತ್, ಅ. 29ರಂದು ರಾತ್ರಿ ಮದ್ಯಪಾನ ಮಾಡಿ ಬಂದು, ಕುಡಿಯಲು ಹಣ ಕೊಡುವಂತೆ ತಾಯಿ ಚಿಕ್ಕಮ್ಮ ಅವರನ್ನು ಪೀಡಿಸಿದ್ದಾನೆ. ಕೂಲಿ ಮಾಡಿ ಜೀವನ ಮಾಡಲು ಕಷ್ಟವಿರುವಾಗ, ಕುಡಿಯಲು ಹಣ ಎಲ್ಲಿಂದ ಕೊಡಲಿ ಎಂದು ಕೇಳಿದ್ದಕ್ಕೆ, ಕುಪಿತಗೊಂಡ ಆತ,  ತಾಯಿಯ ಕಪಾಳಕ್ಕೆ ಹೊಡೆದು, ದೊಣ್ಣಿಯಿಂದ ಥಳಿಸಿದ್ದ. ಅಕ್ಕಪಕ್ಕದ ಮನೆಯವರು ಬಂದು ಸಮಾಧಾನಪಡಿಸಿದ್ದಾರೆ.

ಸುಸ್ತಾಗಿದ್ದ ಚಿಕ್ಕಮ್ಮ ಅವರನ್ನು ಅ. 30 ರಂದು ಕೊಣನೂರು ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದು, ವೈದ್ಯರ ಸಲಹೆಯಂತೆ  ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆ, ಜೀವಜ್ಯೋತಿ ಆಸ್ಪತ್ರೆಯಲ್ಲಿ ತೋರಿಸಿ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನ. 5ರಂದು ಚಿಕ್ಕಮ್ಮ ಮೃತಪಟ್ಟಿದ್ದಾರೆ.

ADVERTISEMENT

ತಾಯಿಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಭರತ್‌ನನ್ನು ಕೆ.ಆರ್. ನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.