ಅರಕಲಗೂಡು: ಪಟ್ಟಣದಲ್ಲಿ ಪೊಲೀಸರು ಶುಕ್ರವಾರ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಬೈಕ್ ಸವಾರರಿಗೆ ದಂಡದ ಬಿಸಿ ಮುಟ್ಟಿಸಿ ಜಾಗೃತಿ ಮೂಡಿಸಿದರು.
ಕೋಟೆ, ಪೇಟೆ ಹಾಗೂ ಅನಕೃ ವೃತ್ತದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಬೈಕ್ ಸವಾರರನ್ನು ಅಡ್ಡಗಟ್ಟಿ ಹೆಲ್ಮೆಟ್ ತರುವಂತೆ ತಾಕೀತು ಮಾಡಿದರು. ದಂಡ ಪಾವತಿಸುವ ಹಣದಲ್ಲಿ ಹೆಲ್ಮೆಟ್ ಖರೀದಿಸಿ ತಂದವರಿಗೆ ದಂಡ ವಿಧಿಸಲಿಲ್ಲ. ಹೆಲ್ಮೆಟ್ ತರದ ಬೈಕ್ ಸವಾರರಿಗೆ ದಂಡ ವಿಧಿಸಿದರು.
ಬೈಕ್ ಸವಾರರಿಗೆ ಹೆಲ್ಮೆಟ್ ಧರಿಸುವಂತೆ ಜಾಗೃತಿ ಮೂಡಿಸಲಾಗಿದೆ. ಕಳೆದ ಮೂರು ದಿನಗಳಿಂದ ಹೆಲ್ಮೆಟ್ ಧರಿಸದ 210 ಮಂದಿಗೆ ತಲಾ ₹500 ದಂಡ ವಿಧಿಸಲಾಗಿದೆ ಎಂದು ಸಬ್ ಇನ್ ಸ್ಪೆಕ್ಟರ್ ಕಾಳೇಗೌಡ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.