ADVERTISEMENT

ಮತೀಯ ಗಲಭೆ: ಸಾವು, ನೋವು ಹೆಚ್ಚಳ- ಕೋಡಿ ಮಠದ ಸ್ವಾಮೀಜಿ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 15:16 IST
Last Updated 5 ಏಪ್ರಿಲ್ 2022, 15:16 IST
ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಕೋಡಿಮಠದ ಪೀಠಾಧ್ಯಕ್ಷರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಯುಗಾದಿ ಭವಿಷ್ಯ ವಾಣಿ ನುಡಿದರು.
ಅರಸೀಕೆರೆ ತಾಲ್ಲೂಕು ಹಾರನಹಳ್ಳಿ ಕೋಡಿಮಠದ ಪೀಠಾಧ್ಯಕ್ಷರಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಯುಗಾದಿ ಭವಿಷ್ಯ ವಾಣಿ ನುಡಿದರು.   

ಅರಸೀಕೆರೆ: ‘ಸಮಾಜದಲ್ಲಿ ಅಶಾಂತಿ, ಮತೀಯ ಗಲಭೆ, ದೊಂಬಿ ಹೆಚ್ಚಾಗಿ ಸಾವು, ನೋವು ಕಾಡಲಿದೆ’ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಮಠದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸುಂದರವಾದ ಹೆಣ್ಣು ಮಕ್ಕಳಿಗೆ ಅಂಗಾಂಗ ಸಮಸ್ಯೆ ಉಂಟಾಗುತ್ತದೆ. ರಾಜಕೀಯ ವಿಪ್ಲವವಾಗಿ ರಾಜಕೀಯ ಗುಂಪುಗಳು ಸೃಷ್ಟಿಯಾಗುತ್ತವೆ. ಬೆಂಕಿಯ ಅನಾಹುತ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತದೆ’ ಎಂದು ನುಡಿದಿದ್ದಾರೆ.

‘ಭಾರತದಲ್ಲಿ ಈ ಸಂವತ್ಸರದಲ್ಲಿ ಈವರೆಗೂ ಕಂಡು, ಕೇಳರಿಯದಂತ ಬಹುದೊಡ್ಡ ಆಘಾತ ಆಗುತ್ತದೆ. ಜಗತ್ತಿನ ಸಾಮ್ರಾಟರು ಎನಿಸಿಕೊಂಡವರು ತಲ್ಲಣಗೊಳ್ಳುತ್ತಾರೆ’ ಎಂದರು.

ADVERTISEMENT

‘ಈ ಬಾರಿ ಮುಂಗಾರು ಚೆನ್ನಾಗಿ ಆಗುತ್ತದೆ. ಆದರೆ ಹಿಂಗಾರು ಕಡಿಮೆ ಆಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಲೆನಾಡು ಬಯಲಾಗುತ್ತದೆ, ಬಯಲು ಮಲೆನಾಡಾಗುತ್ತದೆ. ನಿರೀಕ್ಷಿತ ಪ್ರದೇಶದಲ್ಲಿ ಮಳೆ ಸರಿಯಾಗಿ ಆಗುವುದಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.