ಕೊಣನೂರು: ದಕ್ಷಿಣಕಾಶಿ ಪ್ರಸಿದ್ಧಿಯ ರಾಮನಾಥಪುರದಲ್ಲಿ ಸಂಕ್ರಾಂತಿಯ ನಿಮಿತ್ತ ವಿವಿಧ ಉತ್ಸವಗಳು ಜರಗಿದವು.
ಇಲ್ಲಿನ ಚತುಯರ್ಗ ಮೂರ್ತಿ ರಾಮೇಶ್ವರಸ್ವಾಮಿ, ಅಗಸ್ತ್ಯೇಶ್ವರಸ್ವಾಮಿ, ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವಗಳ ಮೆರವಣಿಗೆ ಮನಸೆಳೆಯಿತು.
ವಿವಿಧ ದೇವಾಲಯಗಳಿಂದ ಹೊರಟ ದೇವತೆಗಳ ಉತ್ಸವದ ಸಾಲು ಸಂಕ್ರಾಂತಿ ಮಂಟಪ ತಲುಪಿ, ಅಲ್ಲಿ ಮೂರು ದೇವರ ಮೂರ್ತಿಗಳಿಗೂ ಸಂಕ್ರಾಂತಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಉತ್ಸವದ ಮಾರ್ಗದುದ್ದಕ್ಕೂ ಭಕ್ತರು ದೇವರ ದರ್ಶನ ಪಡೆದು ಹಣ್ಣುಕಾಯಿ ಅರ್ಪಿಸಿದರು.
ಸಾವಿರಾರು ಭಕ್ತರು ಸಂಕ್ರಾಂತಿ ಹಬ್ಬದ ಅಂಗವಾಗಿ ಕಾವೇರಿ ಸ್ನಾನ ಘಟ್ಟದಲ್ಲಿ ಮಿಂದರು. ಬಳಿಕ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.