ADVERTISEMENT

ಬಾಣಾವರ | ‘ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಾಗಬೇಕು’

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:17 IST
Last Updated 31 ಮಾರ್ಚ್ 2024, 15:17 IST
ಬಾಣಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಚಾರಣೆ ಆಚರಣೆ ಆಚರಿಸಲಾಯಿತು
ಬಾಣಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಚಾರಣೆ ಆಚರಣೆ ಆಚರಿಸಲಾಯಿತು   

ಬಾಣಾವರ: ‘ಸಮಾಜದಲ್ಲಿನ ಕ್ರಿಯಾಶೀಲ ಪರಿವರ್ತನೆಗೆ ಮಹಿಳೆಯರ ಕೊಡುಗೆ ಅಪಾರ’ ಎಂದು ನಗರ ಠಾಣೆ ಪಿಎಸ್ಐ ಲತಾ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಚಾರಣೆ ಉದ್ಘಾಟಿಸಿ ಮಾತನಾಡಿದರು.

‘ಮಾತೆ ಸಹೋದರಿ ಗೃಹಿಣಿಯಾಗಿ ಎಲ್ಲ ಜವಬ್ದಾರಿಯನ್ನು ಕೌಟುಂಬಿಕ ಚೌಕಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ. ರಾಜಕೀಯ, ಶೈಕ್ಷಣಿಕ, ಅರ್ಥಿಕ, ಸಾಮಾಜಿಕ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದ್ದು ಮತ್ತಷ್ಟು ಬಲ ಹಾಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

ADVERTISEMENT

ಪ್ರಾಂಶುಪಾಲ ಬಿಳಿಕೆರೆ ದೊರೇಶ್ ಮಾತನಾಡಿ, ‘ಜಗತ್ತಿನ ಪರಿವರ್ತನೆಗೆ ಹೆಣ್ಣು ಕಾರಣ ಎನ್ನುವುದು ಹೆಮ್ಮಯ ಸಂಗತಿ ಅಲ್ಲದೇ ನಾರಿಶಕ್ತಿಯಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯವಾಗಲಿದೆ’ ಎಂದು ಆಭಿಪ್ರಾಯಪಟ್ಟರು,

ಸಮಾಜ ಸೇವಕ ಕಾಂಚನಮಾಲಾ, ಎಚ್.ಜೆ.ಪ್ರಿಯಾಂಕ, ಕ್ರಿಕೆಟ್ ಕೋಚ್ ಸರಿಯಾಬೇಗಂ, ಪ್ರಾಧ್ಯಪಕಿ ಡಾ.ಪುಷ್ಪಭಾರತ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.