ADVERTISEMENT

ಕುಮಾರಸ್ವಾಮಿ ಕುಟುಂಬಕ್ಕೆ ಸಿದ್ದೇಶ್ವರ ಸ್ವಾಮಿ ಪ್ರಸಾದ.!: ಶುರುವಾಗಿದೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 12:42 IST
Last Updated 27 ಅಕ್ಟೋಬರ್ 2024, 12:42 IST
   

ಹಾಸನ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸಿದ್ದೇಶ್ವರ ಸ್ವಾಮಿ ಬಲಗಡೆಯಿಂದ ಹೂವು ಬಿದ್ದಿದ್ದು, ಸಿದ್ದೇಶ್ವರ ಸ್ವಾಮಿ ಶುಭ ಸೂಚನೆ ನೀಡಿದರೆ ಎನ್ನುವ ಚರ್ಚೆ ಶುರುವಾಗಿದೆ.

ಪತ್ನಿ, ಸೊಸೆ, ಮೊಮ್ಮಗನ ಜೊತೆ ಹಾಸನಾಂಬೆ ದರ್ಶನ ನಂತರ ಸಿದ್ದೇಶ್ವರಸ್ವಾಮಿ ದರ್ಶನ ಮಾಡಿದ ವೇಳೆ, ಸಿದ್ದೇಶ್ವರಸ್ವಾಮಿ ಬಲಗಡೆಯಿಂದ ಹೂ ಬಿದ್ದಿದೆ. ದೇವರ ಮೇಲಿಂದ ಹೂವು ಬಿದ್ದಾಗ, ಪತ್ನಿ ಅನಿತಾ ಅವರು ಕುಮಾರಸ್ವಾಮಿ ಅವರಿಗೆ ಕೈ ಸನ್ನೆಮಾಡಿ ತಿಳಿಸಿದ್ದಾರೆ.

ಚನ್ನಪಟ್ಟಣ ಚುನಾವಣೆ ನಡುವೆ ಹಾಸನಾಂಬೆ, ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದ ವೇಳೆ ಈ ರೀತಿಯ ಶುಭ ಸೂಚನೆ ಸಿಕ್ಕಿರುವುದು ಕುಮಾರಸ್ವಾಮಿ ಕುಟುಂಬಕ್ಕೆ ಸಂತಸ ತಂದಂತಾಗಿದೆ ಎಂದು ಜೆಡಿಎಸ್‌ ಮುಖಂಡರು ಹೇಳುತ್ತಿದ್ದಾರೆ.

ADVERTISEMENT

’ಶುಭ ಸಮಾರಂಭ ಆಯೋಜಿಸುವ ಮುನ್ನ ಭಕ್ತರು ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕದ ನಂತರ ಪ್ರಸಾದ ಕೇಳುವುದು ವಾಡಿಕೆ. ಅದರಂತೆ ಪ್ರಸಾದವಾದ ನಂತರ ಶುಭ ಕಾರ್ಯ ನೆರವೇರಿರುವ ನಂಬಿಕೆ ಇದೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.