ADVERTISEMENT

SSLC Result 2024 | ಅರಕಲಗೂಡು: ಬಿಜಿಎಸ್ ಪ್ರೌಢಶಾಲೆಗೆ ಶೇ 100 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 9 ಮೇ 2024, 12:48 IST
Last Updated 9 ಮೇ 2024, 12:48 IST
ಜಿ.ಜೆ. ಪೂಜಾ
ಜಿ.ಜೆ. ಪೂಜಾ   

ಅರಕಲಗೂಡು: ಪಟ್ಟಣದ ಬಿಜಿಎಸ್ ಪ್ರೌಢಶಾಲೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದೊರೆತಿದೆ.

77 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 20 ವಿದ್ಯಾರ್ಥಿಗಳು ಎ–ಪ್ಲಸ್‌ ಗ್ರೇಡ್, 24 ವಿದ್ಯಾರ್ಥಿಗಳು ಎ ಗ್ರೇಡ್, 15 ವಿದ್ಯಾರ್ಥಿಗಳು ಬಿ–ಪ್ಲಸ್‌ ಗ್ರೇಡ್, 9 ಮಂದಿ ಬಿ ಗ್ರೇಡ್ ಹಾಗೂ 9 ವಿದ್ಯಾರ್ಥಿಗಳು ಸಿ–ಪ್ಲಸ್‌ ಗ್ರೇಡ್ ನಲ್ಲಿ ತೇರ್ಗಡೆಯಾಗಿದ್ದಾರೆ.

ಜಿ.ಜೆ. ಪೂಜಾ 621 (ಶೇ 99.36) ಅಂಕ ಪಡೆದು ತಾಲ್ಲೂಕಿಗೆ ಮೊದಲ ಹಾಗೂ ರಾಜ್ಯದಲ್ಲಿ 5ನೇ ಸ್ಥಾನ ಗಳಿಸಿದ್ದಾರೆ. ವಿ.ಆರ್. ವರ್ಷಾರಾಜ್ 614 (ಶೇ 98.24), ಎ.ಎಸ್. ಛಲನ 613 (ಶೇ 98.08), ಎಂ.ಇ. ಶುಭಮತಿ 612 (ಶೇ 97.92), ಎಚ್.ಎಚ್. ಡಿಂಪನ 604 (ಶೇ 96.64) ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮುಖ್ಯ ಶಿಕ್ಷಕಿ ಡುಲ್ಸಿನ್ ಮೆಂಡಾ ತಿಳಿಸಿದ್ದಾರೆ.

ADVERTISEMENT
ವಿ.ಆರ್ ವರ್ಷಾರಾಜ್
ಎ.ಎಸ್. ಛಲನ
ಎಂ.ಇ.ಶುಭಮತಿ
ಎಚ್.ಎಚ್. ಡಿಂಪನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.