ADVERTISEMENT

ಅಂಬಾರಿ ಆನೆ ಅರ್ಜುನನ ಸಮಾಧಿಗೆ ಕಲ್ಲಿನ ಕಾಂಪೌಂಡ್

ದರ್ಶನ್‌ ಅಭಿಮಾನಿಗಳು ತಂದಿದ್ದ ಕಲ್ಲು ಖರೀದಿಸಿದ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 23 ಮೇ 2024, 15:59 IST
Last Updated 23 ಮೇ 2024, 15:59 IST
ಹೆತ್ತೂರು ಸಮೀಪದ ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರ್ಜುನನ ಸಮಾಧಿ ಸುತ್ತ ಹಾಸುಗಲ್ಲು ನಿಲ್ಲಿಸಿದ ಅರಣ್ಯ ಸಿಬ್ಬಂದಿ.
ಹೆತ್ತೂರು ಸಮೀಪದ ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರ್ಜುನನ ಸಮಾಧಿ ಸುತ್ತ ಹಾಸುಗಲ್ಲು ನಿಲ್ಲಿಸಿದ ಅರಣ್ಯ ಸಿಬ್ಬಂದಿ.   

ಹೆತ್ತೂರು (ಹಾಸನ): ಸಮೀಪದ ದಬ್ಬಳಿಕಟ್ಟೆ ಅರಣ್ಯದಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅಂಬಾರಿ ಆನೆ ಅರ್ಜುನನ ಸಮಾಧಿ ಸುತ್ತಲೂ ಹಾಸುಗಲ್ಲು ನಿಲ್ಲಿಸಿ ರಕ್ಷಣೆ ನೀಡಲಾಗಿದೆ.

2023 ರ ಡಿಸೆಂಬರ್ 4 ರಂದು ನಡೆದ ಕಾರ್ಯಾಚರಣೆ ವೇಳೆ ಅರ್ಜುನ ಮೃತಪಟ್ಟಿತ್ತು. ಡಿ.5 ರಂದು ಅಲ್ಲಿಯೇ ಸಮಾಧಿ ಮಾಡಲಾಗಿತ್ತು. ಅಲ್ಲಿಯೇ ಸ್ಮಾರಕ ನಿರ್ಮಿಸಬೇಕೆಂಬ ಒತ್ತಾಯವೂ ನಂತರ ಕೇಳಿ ಬಂದಿತ್ತು.

‘ಸಮಾಧಿ ನಿರ್ಮಾಣಕ್ಕಾಗಿ ಚಿತ್ರನಟ ದರ್ಶನ್‌ ಅಭಿಮಾನಿಗಳು ಬುಧವಾರ ವಾಹನದಲ್ಲಿ ಹಾಸುಗಲ್ಲುಗಳನ್ನು ತಂದಿದ್ದರು. ದಬ್ಬಳಿಕಟ್ಟೆ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವುದರಿಂದ ಸ್ಮಾರಕ ನಿರ್ಮಿಸುವಂತಿಲ್ಲ. ಸರ್ಕಾರದಿಂದ ಸೂಚನೆ ಬಂದಿಲ್ಲ. ಎಲ್ಲಿ ಸ್ಮಾರಕ ನಿರ್ಮಿಸಬೇಕೆಂಬುದು ತೀರ್ಮಾನವಾದ ನಂತರ ಕ್ರಮ ಕೈಗೊಳ್ಳಲಾಗುವುದು’ ಎಂದು ಇಲಾಖೆ ಸಿಬ್ಬಂದಿ, ಅಷ್ಟೂ ಕಲ್ಲುಗಳನ್ನು ಸುಪರ್ದಿಗೆ ತೆಗೆದುಕೊಂಡರು.

ADVERTISEMENT

‘ಕಲ್ಲುಗಳನ್ನು ತಂದಿದ್ದವರಿಗೆ ಅದರ ನಿಗದಿತ ಹಣ ಸಂದಾಯ ಮಾಡಿ, ಅವುಗಳನ್ನೇ ಬಳಸಿ, ಸಮಾಧಿ ಜಾಗವನ್ನು ರಕ್ಷಿಸಲಾಗಿದೆ. ಜೋರು ಮಳೆ ಬಂದರೂ, ಸಮಾಧಿಗೆ ತೊಂದರೆಯಾಗದು’ ಎಂದು ವಲಯ ಅರಣ್ಯಾಧಿಕಾರಿ ವಿಜಯ್‌ಕುಮಾರ್ ತಿಳಿಸಿದ್ದಾರೆ.

ಹೆತ್ತೂರು ಸಮೀಪದ ದಬ್ಬಳಿಕಟ್ಟೆ ಅರಣ್ಯದಲ್ಲಿ ಇರುವ ಅರ್ಜುನನ ಸಮಾಧಿ ಸುತ್ತಲೂ ಹಾಸುಗಲ್ಲು ಹಾಕಿದ ಅರಣ್ಯ ಇಲಾಖೆ ಅಧಿಕಾರಿಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.