ADVERTISEMENT

ಬೇಲೂರು: ವಯನಾಡಿಗೆ ಅಗತ್ಯ ವಸ್ತುಗಳ ಪೂರೈಕೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2024, 13:39 IST
Last Updated 11 ಆಗಸ್ಟ್ 2024, 13:39 IST
ಪ್ರಕೃತಿ ವಿಕೋಪ ಸಂಭವಿಸಿದ ಕೇರಳದ ವಯನಾಡ್‌ಗೆ 27x7 ಸಮಾಜ ಸೇವಾ ತಂಡ, ಆಲ್ ಇಂಡಿಯಾ ಮುಸ್ಲಿಂ ಡೆವಲಪ್‌ಮೆಂಟ್ ಫೋರಂ ಸಾರ್ವಜನಿಕರಿಂದ ಸಂಗ್ರಹಿದ ಅಗತ್ಯ ವಸ್ತುಗಳನ್ನು ಕೇರಳಕ್ಕೆ ಕಳುಹಿಸಲು ತಹಶೀಲ್ದಾರ್ ಎಂ.ಮಮತಾ ಚಾಲನೆ ನೀಡಿದರು. ನೂರ್ ಅಹಮ್ಮದ್, ಅಬ್ರಾರ್ ಭಾಗವಹಿಸಿದ್ದರು.

ಬೇಲೂರು: ಪ್ರಕೃತಿ ವಿಕೋಪಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ಕೇರಳದ ವಯನಾಡಿನ ಜನತೆಗೆ ಇಲ್ಲಿನ 24*7 ಸೇವಾತಂಡ ಹಾಗೂ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ವತಿಯಿಂದ, ಸಾರ್ವಜನಿಕರಿಂದ ಸಂಗ್ರಹಿಸಲಾಗಿದ್ದ ಅಗತ್ಯ ವಸ್ತುಗಳನ್ನು ಕೇರಳಕ್ಕೆ ವಾಹನಗಳಲ್ಲಿ ಕಳುಹಿಸಲು ತಹಶೀಲ್ದಾರ್ ಎಂ.ಮಮತಾ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಮತಾ ಮಾತನಾಡಿ, ಪ್ರಕೃತಿ ವಿಕೋಪಕ್ಕೆ ನಲುಗಿರುವ ಕೇರಳ ರಾಜ್ಯದ ವಾಯನಾಡಿಗೆ ಅಗತ್ಯ ವಸ್ತುಗಳನ್ನು ಕಳುಹಿಸುತ್ತಿರುವುದು ಶ್ಲಾಘನೀಯವಾಗಿದೆ. ಪಕ್ಕದ ರಾಜ್ಯದವರು ಸಂಕಷ್ಟದಲ್ಲಿದ್ದಾಗ ಅವರಿಗೆ ನೆರವಾಗುವುದು ಮಾನವ ಧರ್ಮ. ಮಾನವೀಯ ಮೌಲ್ಯವನ್ನು ಅರಿತು ನಾವೆಲ್ಲರೂ ಸಹಕಾರ ನೀಡಬೇಕು ಎಂದರು.

ಆಂಬ್ಯುಲೆನ್ಸ್ ಚಾಲಕ ಸುಫಿಯಾನ್. ಸೋನು, 24*7 ಸಮಾಜ ಸೇವಾ ತಂಡದ ಸೈಫ್, ಮುರ್ತುಸ ಫರಹಾನ್, ಅದ್ನಾನ್, ಶಾಯಾಜ್, ಅಜ್ಗರ್ ಅಲಿ, ಮುಸ್ತಾಕ್, ಅನ್ವರ್‌ಖಾನ್, ನೂರ್ ಅಹಮ್ಮದ್, ಅಬ್ರಾರ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.