ADVERTISEMENT

ದೇವಾಲಯಗಳಿಂದ ಶಾಂತಿ, ನೆಮ್ಮದಿ ಸಾಧ್ಯ: ಶಾಸಕ ಕೆ.ಎಂ.ಶಿವಲಿಂಗೇಗೌಡ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 14:07 IST
Last Updated 22 ನವೆಂಬರ್ 2024, 14:07 IST
ಅರಸೀಕೆರೆ ತಾಲ್ಲೂಕಿನ ಬೈರಾನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪ್ಲೇಗಿನಮ್ಮ ದೇವಿಯ ನೂತನ ಶಿಲಾ ಪ್ರತಿಷ್ಟಾಪನೆ ಮತ್ತು ನೂತನ ದೇವಾಲಯದ ಪ್ರತಿಷ್ಟಾಪನ ಮಹೋತ್ಸವ ನೆರವೇರಿತು
ಅರಸೀಕೆರೆ ತಾಲ್ಲೂಕಿನ ಬೈರಾನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪ್ಲೇಗಿನಮ್ಮ ದೇವಿಯ ನೂತನ ಶಿಲಾ ಪ್ರತಿಷ್ಟಾಪನೆ ಮತ್ತು ನೂತನ ದೇವಾಲಯದ ಪ್ರತಿಷ್ಟಾಪನ ಮಹೋತ್ಸವ ನೆರವೇರಿತು   

ಅರಸೀಕೆರೆ: ‘ಮನುಷ್ಯನ ದಿನನಿತ್ಯ ಕೆಲಸ ಹಾಗೂ ಕುಟುಂಬ ನಿರ್ವಹಣೆ ಒತ್ತಡದ ನಡುವೆ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವುದು ಸಹಜ. ಆದ್ದರಿಂದ ದೇವಾಲಯ ಹಾಗೂ ದೇವರ ದರ್ಶನದಿಂದ ಶಾಂತಿ ನೆಮ್ಮದಿ ಲಭಿಸುತ್ತದೆ’ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲ್ಲೂಕಿನ ಬೈರನಾಯಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ಲೇಗಿನಮ್ಮ ದೇವಿ ನೂತನ ಶಿಲಾ ಪ್ರತಿಷ್ಠಾಪನೆ ಮತ್ತು ನೂತನ ದೇವಾಲಯದ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದರು.

‘ಆಧುನಿಕ ಜಗತ್ತಿನಲ್ಲಿ ಮನುಷ್ಯನ ಜೀವನ ಅತ್ಯಂತ ವೇಗದಿಂದ ಸಾಗುತ್ತಿದೆ. ಆ ನಿಟ್ಟಿನಲ್ಲಿ ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ದೇವಾಲಯಕ್ಕೆ ತೆರಳುವ ಪ್ರವೃತಿ ಮೂಡಿಸಬೇಕು. ಇದರಿಂದ ಭಾರತೀಯ ಸಂಸ್ಕೃತಿ, ಸಂಪ್ರದಾಯವನ್ನು ಅರಿಯಲು ಸಾಧ್ಯವಾಗಲಿದೆ’ ಎಂದು ಹೇಳಿದರು.

ADVERTISEMENT

ಗುರುವಾರ ಗೋಧೂಳಿ ಲಗ್ನದಲ್ಲಿ ದೇವಸ್ಥಾನದಲ್ಲಿ ವಿವಿಧ ಪೂಜೆ ನೆರವೇರಿದವು. ಶುಕ್ರವಾರ ಮುಂಜಾನೆಯಿಂದಲೇ ನಾನಾ ಅಭಿಷೇಕಗಳು, ಹೋಮ ಹವನಗಳು, ಪೂರ್ಣಾಹುತಿದೊಂದಿಗೆ ಕದಳಿ ಛೇದನ ನಡೆಯಿತು. ನಂತರ ನೂತನ ವಿಗ್ರಹಕ್ಕೆ ವಿಶೇಷ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿತು.

ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ಪ್ಲೇಗಿನಮ್ಮ ದೇವಿ ಹಾಗೂ ಮಹಾಕಾಳಿ ಅಮ್ಮನವರ ಮೆರವಣಿಗೆ ಅರಸೀಕೆರೆ ನಗರ ಹಾಗೂ ಬೈರನಾಯಕನಹಳ್ಳಿ ಗ್ರಾಮದಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡದೊಂದಿಗೆ ವೈಭವದಿಂದ ನಡೆಯಿತು.

ಬೈರಾನಾಯಕನಹಳ್ಳಿ ಗ್ರಾಮಸ್ಥರು ಸೇರಿದಂತೆ ಅಪಾರ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.