ಚನ್ನರಾಯಪಟ್ಟಣ: ಪಟ್ಟಣದಲ್ಲಿ ಕಸ ಹಾಕುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಆ ಜಾಗದಲ್ಲಿ ಪುರಸಭೆಯಿಂದ ಕಿರು ಉದ್ಯಾನ ನಿರ್ಮಿಸಲಾಗುತ್ತಿದೆ.
9ನೇ ವಾರ್ಡ್‍ನಲ್ಲಿ ನಾಗಸಮುದ್ರ ರಸ್ತೆಯ ಪ್ರವೇಶ ದ್ವಾರದಲ್ಲಿ ಅನೇಕ ವರ್ಷಗಳಿಂದ ಜನ ಕಸ ಹಾಕುತ್ತಿದ್ದರು. ಆ ಜಾಗವನ್ನು ಸ್ವಚ್ಛಗೊಳಿಸಿ ಕಿರು ಉದ್ಯಾನ ನಿರ್ಮಿಸಿ ಗಿಡಗಳನ್ನು ನೆಡಲಾಗಿದೆ. ಅನೇಕ ಸೂಕ್ತಿಗಳನ್ನು ಹಾಕಲಾಗಿದೆ. ಡೆಂಗಿ ಹರಡದಂತೆ ಜಾಗೃತಿ ಮೂಡಿಸಲಾಗುತ್ತಿದೆ.
‘18ನೇ ವಾರ್ಡ್‍ನಲ್ಲಿ ಗಣೇಶನಗರದಲ್ಲಿ ಕಿರು ಉದ್ಯಾನ ನಿರ್ಮಿಸಲಾಗಿದೆ. ಎಲ್ಲೆಂದರಲ್ಲಿ ಕಸವನ್ನು ಎಸೆಯಬಾರದು ಎಂಬ ಜಾಗೃತಿ ಜನರಲ್ಲಿ ಬರಬೇಕು. ವಾರ್ಡ್‍ಗಳಲ್ಲಿ ನಿತ್ಯ ಸಂಚರಿಸುವ ಕಸ ವಿಲೇವಾರಿ ಮಾಡುವ ಆಟೊಗಳಿಗೆ ಕಸ ನೀಡಬೇಕು. ಹೇಮಾವತಿ ಉದ್ಯಾನದ ಪಕ್ಕ ಮತ್ತು ಪಟ್ಟಣದ ಶ್ರವಣಬೆಳಗೊಳದ ರಸ್ತೆಯ ಪಕ್ಕದಲ್ಲಿ ರಾಶಿಗಳಗಟ್ಟಲೇ ಕಸ ಹಾಕಲಾಗುತ್ತದೆ. ದುರ್ವಾಸನೆ ಬರುವ ಜೊತೆಗೆ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಪಟ್ಟಣದಲ್ಲಿ ಇನ್ನೂ 10 ಕಡೆ ಕಿರು ಉದ್ಯಾನ ನಿರ್ಮಿಸುವ ಗುರಿ ಹೊಂದಲಾಗಿದೆ. ಸ್ಥಳೀಯರಿಗೆ ಇದರ ನಿರ್ವಹಣೆಯ ಜವಾಬ್ದಾರಿ ನೀಡಲಾಗುವುದು’ ಎಂದು ಪುರಸಭೆಯ ಆರೋಗ್ಯ ನಿರೀಕ್ಷಕ ಡಿ.ಪಿ. ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.