ADVERTISEMENT

ಹೇಮಾವತಿ ನದಿಗೆ ಲಕ್ಷ ಕ್ಯುಸೆಕ್‌ ನೀರು: ಹಾಸನ ಜಿಲ್ಲೆಯ ಹಲವೆಡೆ ಪ್ರವಾಹದ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2024, 7:27 IST
Last Updated 26 ಜುಲೈ 2024, 7:27 IST
<div class="paragraphs"><p>ಯಸಳೂರು ಹೋಬಳಿ ಹೊಸೂರು ಗ್ರಾಮದ ಆಯುರ್ವೇದ ಆಸ್ಪತ್ರೆಯ ಕಾಂಪೌಂಡ್ ಕುಸಿದಿದೆ.</p></div>

ಯಸಳೂರು ಹೋಬಳಿ ಹೊಸೂರು ಗ್ರಾಮದ ಆಯುರ್ವೇದ ಆಸ್ಪತ್ರೆಯ ಕಾಂಪೌಂಡ್ ಕುಸಿದಿದೆ.

   

– ‍ಪ್ರಜಾವಾಣಿ ಚಿತ್ರ

ಹಾಸನ: ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರಿದಿದ್ದು, ಹೇಮಾವತಿ ನದಿ ನೀರಿನಿಂದ ಸಕಲೇಶಪುರದ ಆಜಾದ್ ನಗರ ಜಲಾವೃತವಾಗಿದೆ. ಇಲ್ಲಿನ ಜನರನ್ನು ತಹಶೀಲ್ದಾರ್ ಜಿ. ಮೇಘನಾ, ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಿದ್ದಾರೆ.

ADVERTISEMENT

ಹೇಮಾವತಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅದೇ ಪ್ರಮಾಣದಲ್ಲಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಸಕಲೇಶಪುರದ ಹೊಳೆಮಲ್ಲೇಶ್ವರ ದೇವಸ್ಥಾನದ ಗರ್ಭಗುಡಿಗೆ ಹೇಮಾವತಿ ನೀರು ನುಗ್ಗಿದೆ. ಹೇಮಾವತಿ ನದಿ ನೀರಿನಿಂದ ಅರಕಲಗೂಡು–ಹೊಳೆನರಸೀಪುರ, ಚನ್ನರಾಯಪಟ್ಟಣ–ಹೊಳೆನರಸೀಪುರ ರಸ್ತೆಗಳು ಜಲಾವೃತವಾಗಿದೆ. ಹೊಳೆನರಸೀಪುರದ ಅಗ್ನಿಶಾಮಕ ಠಾಣೆಗೂ ನೀರು ನುಗ್ಗಿದೆ. ಖಾಸಗಿ ಶಾಲೆಗೂ ನೀರು ನುಗ್ಗಿದೆ.

ಸಕಲೇಶಪುರದ ಹೊಳೆಮಲ್ಲೇಶ್ವರ ದೇವಸ್ಥಾನ ಜಲಾವೃತವಾಗಿದೆ.

ಜನಾಪುರ – ವನಗೂರು ರಾಜ್ಯ ಹೆದ್ದಾರಿ 107 ರಲ್ಲಿ ಭೂಕುಸಿತವಾಗಿದ್ದು, ರಸ್ತೆಯೇ ಕೊಚ್ಚಿ ಹೋಗುವ ಆತಂಕ ಎದುರಾಗಿದೆ. ಇನ್ನೂ ಕೆಲವು ಅಡಿ ಮಣ್ಣು ಕುಸಿದರೆ, ಇಡೀ ರಸ್ತೆಯೇ ಕೊಚ್ಚಿ ಹೋಗಲಿದ್ದು, ಸಕಲೇಶಪುರ–ಹೆತ್ತೂರು ನಡುವಿನ ಸಂಪರ್ಕ ಕಡಿತವಾಗಲಿದೆ. ಯಸಳೂರು ಹೋಬಳಿ ಹೊಸೂರು ಗ್ರಾಮದ ಆಯುರ್ವೇದ ಆಸ್ಪತ್ರೆಯ ಕಾಂಪೌಂಡ್ ಕುಸಿದಿದೆ.

ಪ್ರವಾಸಿಗರಿಗೆ ನಿರ್ಬಂಧ:

ಹಾಸನ ತಾಲ್ಲೂಕಿನ ಗೊರೂರು ಜಲಾಶಯಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ನದಿಗೆ ಬಿಡಲಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಜಲಾಶಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.