ಬೇಲೂರು: ತಾಲ್ಲೂಕಿನ ಹಿರಿಕೋಲೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಕಾಡಾನೆಗಳು ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿವೆ.
ಕಟಾವಿಗೆ ಬಂದ ಜೋಳ, ಭತ್ತವನ್ನು ತಿಂದು, ತುಳಿದು ಹಾಕಿವೆ. ತೆಂಗಿನ ಮರಗಳನ್ನು ಕಿತ್ತು ಹಾಕಿವೆ. ನಾಗರತ್ನಾ, ಗುರುದೇವ್, ಮಲ್ಲೇಶ್ ಅವರಿಗೆ ಸೇರಿದ್ದ ತೆಂಗಿನ ಮರಗಳನ್ನು ಬುಡಸಮೇತ ಕಿತ್ತು ಹಾಕಿವೆ. ಜೋಳದ ಬೆಳೆ ತುಳಿದು ನಾಶಪಡಿಸಿವೆ.
ಗ್ರಾಮದ ಯೋಗೇಶ್, ಚಂದ್ರಶೇಖರ್, ದೇವರಾಜ್, ಜಯರಾಜ್ ಅವರ ಜಮೀನಿನಲ್ಲಿ ಜೋಳದ ಬೆಳೆಯನ್ನು ತಿಂದು ಹಾಳು ಮಾಡಿವೆ. ಮಹಂತೇಗೌಡ ಅವರ ಮಾವಿನ ಮರಗಳನ್ನು ಹಾಳು ಮಾಡಿವೆ.
ಗ್ರಾಮದ ಸಂದೀಪ್ ಮಾತನಾಡಿ, ‘ಕಾಡಾನೆಗಳು ಬೆಳೆಯನ್ನು ಹಾಳು ಮಾಡಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿ ಕೃಷಿ ಮಾಡಿದ್ದೆವು, ಈಗ ಬೆಳೆ ಕೈಸೇರದಂತಾಗಿದ್ದು, ಸಾಲ ತಿರಿಸಲು ಕಷ್ಟವಾಗುತ್ತದೆ. ಸರ್ಕಾರ ಈ ಬಗ್ಗೆ ಹೆಚ್ಚಿನ ಗಮನಹರಿಸಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು ಹಾಗೂ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.