ಸಕಲೇಶಪುರ: ತಾಲ್ಲೂಕಿನ ಆನೇಮಹಲ್ ಗ್ರಾಮದಲ್ಲಿ ಶನಿವಾರ ಸಂಜೆ ಮಹಿಳೆಯೊಬ್ಬರು ಮಗುವನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ಮೋಹನ್ ಎಂಬುವವರ ಪತ್ನಿ ಪ್ರಜ್ವಲಾ (26) ಹಾಗೂ ಎರಡೂವರೆ ವರ್ಷದ ಪುತ್ರಿ ಸಾಧ್ವಿ ಮೃತಪಟ್ಟವರು.
‘ಮಹಿಳೆಯ ಪತಿ ಮೋಹನ್ ಮನೆಯಿಂದ ಹೊರ ಹೋದ ನಂತರ ಪ್ರಜ್ವಲಾ ಅವರು ಫ್ಯಾನಿಗೆ ಮಗುವನ್ನು ಸೀರೆಯಿಂದ ನೇಣು ಹಾಕಿ, ಮತ್ತೊಂದು ಸೀರೆಯಿಂದ ತಾನು ಅದೇ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಜ್ವಲಾ ಅವರಿಗೆ ಇತ್ತೀಚೆಗೆ ಎರಡನೇ ವಿವಾಹ ಆಗಿತ್ತು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.