ಹಾಸನ: ಸಕಲೇಶಪುರ ತಾಲ್ಲೂಕಿನ ಕಾಡುಮನೆ ಎಸ್ಟೇಟ್‍ನಲ್ಲಿ ಎತ್ತಿನಹೊಳೆ ಯೋಜನಾ ಹಂತ-1ರ ವಿಯರ್-4 ಮತ್ತು ವಿಯರ್-5 ರಿಂದ ದೊಡ್ಡನಾಗರ ಗ್ರಾಮದ ಡಿಸಿ-3 ರವರೆಗೆ ಪರೀಕ್ಷಾರ್ಥ ಚಾಲನೆಯ ಸಂಬಂಧ ಜೂ.21 ರಿಂದ ಪೈಪ್‌ಲೈನ್‌ಗಳಿಗೆ ನೀರನ್ನು ಹರಿಸಲಾಗುತ್ತಿದೆ.
ನೀರು ಹರಿಯುವ ಪೈಪ್‌ಲೈನ್ ಮಾರ್ಗವು ಕಾಡುಮನೆ ಎಸ್ಟೇಟ್, ಕಾಡುಮನೆ. ಗುರ್ಜನಹಳ್ಳಿ, ದೇಖ್ಲ ನಡಹಳ್ಳಿ, ಕುಂಬರಡಿ, ಹಾರ್ಲೆ ಎಸ್ಟೇಟ್, ಸಾಲ್‍ಡಾನ್ ಎಸ್ಟೇಟ್, ಹಳ್ಳಿಮನೆ ಹಾರ್ಲೆ ಕೂಡಿಗೆ, ಗಾಣದಹೊಳೆ, ಹಬ್ಬಪಾಲೆ, ಹೆನ್ನಲಿ, ದೊಡ್ಡನಗರ ಗ್ರಾಮಗಳ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಹಾದು ಹೋಗಿದೆ.
ವಿಶ್ವೇಶ್ವರಯ್ಯ ಜಲ ನಿಗಮದ ಸ್ವಾಧೀನದಲ್ಲಿ ಇರುವ ಭೂಮಾರ್ಗದಲ್ಲಿ ಪೈಪ್‌ಲೈನ್ ಹಾದು ಹೋಗಿದ್ದು, ದನ-ಕರುಗಳನ್ನು ಕಟ್ಟುವುದಾಗಲಿ, ಸಾರ್ವಜನಿಕರು ಪೈಪ್‍ಲೈನ್‍ಗಳ ಮೇಲೆ ಸಂಚರಿಸುವುದಾಗಲಿ ಮಾಡಬಾರದು. ಇದರಿಂದ ಸಾರ್ವಜನಿಕರ ಅಸ್ತಿ-ಪಾಸ್ತಿ ಮತ್ತು ಪ್ರಾಣಕ್ಕೆ ಹಾನಿಯಾಗುವ ಸಂಭವವಿದೆ.
ಯಾವುದೇ ತರಹದ ನಿರ್ಲಕ್ಷ್ಯಗಳಿಂದ ಅಪಘಾತ ಅಥವಾ ಹಾನಿ ಸಂಭವಿಸಿದರೆ ಜನರೇ ಜವಾಬ್ದಾರರರು. ಸಾರ್ವಜನಿಕರ ನಿರ್ಲಕ್ಷ್ಯದಿಂದ ಆಗುವ ಅನಾಹುತಗಳಿಗೆ ವಿಶ್ವೇಶ್ವರಯ್ಯ ಜಲ ನಿಗಮ ಜವಾಬ್ದಾರಿ ಅಲ್ಲ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎತ್ತಿನಹೊಳೆ ಯೋಜನಾ ವಿಭಾಗ ನಂ.1ರ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.