ರಾಣೆಬೆನ್ನೂರು: ತಾಲ್ಲೂಕಿನ ಸುಕ್ಷೇತ್ರ ಲಿಂಗದಹಳ್ಳಿ ಗ್ರಾಮದ ರಂಭಾಪುರಿ ಪೀಠದ ಶಾಖಾ ಹಿರೇಮಠದ ಅಪರೂಪದ ಸ್ಪಟಿಕಲಿಂಗ ಕಳ್ಳತನವಾದ ಹಿನ್ನೆಲೆಯಲ್ಲಿ ₹1 ಕೋಟಿ ವೆಚ್ಚದಲ್ಲಿ ಹೊಸ ಸ್ಫಟಿಕ ಲಿಂಗವನ್ನು ಕೈಲಾಸ ಮಾನಸ ಸರೋವರದಿಂದ ತರಿಸಿದ್ದು, ಸಾಂಕೇತಿಕವಾಗಿ ಪ್ರತಿಷ್ಠಾಪಿಸಿ ಪೂಜಿಸಲಾಯಿತು.
ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ತನ್ನ ನೌಕರಿಯಿಂದ ಬಂದ ವೇತನ, ಭಕ್ತರು ನೀಡಿದ ದೇಣಿಗೆ ಹಣದ ಜತೆಗೆ ತಮ್ಮ ಹೆಸರಿನಲ್ಲಿದ್ದ ಜೀವ ವಿಮೆ ಪಾಲಿಸಿ ಮೇಲೆ, ಬ್ಯಾಂಕ್ ಹಾಗೂ ಹೆಸ್ಕಾಂ ಸಹಕಾರಿ ಸಂಘದಲ್ಲಿ ಸಾಲ ಮಾಡಿ ರಾಜಸ್ಥಾನ ಮೂಲದ ದಾಮೋದರಜಿ ಎಂಬ ಭಕ್ತರ ಮೂಲಕ ನಮ್ಮ ಪರಿಚಿತರಿಂದ ಕೈಲಾಸ ಮಾನಸ ಸರೋವರದಿಂದ ಸ್ಫಟಿಕ ಲಿಂಗಗಳನ್ನು ತರಿಸಿದ್ದಾರೆ.
ಜ. 23ರಂದು ಕಾಶಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಹೊಸ ಸ್ಫಟಿಕ ಲಿಂಗದ ಪ್ರತಿಷ್ಠಾಪನೆ, ಧರ್ಮಸಭೆ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಸ್ವಾಮೀಜಿ ತಿಳಿಸಿದರು.
ಆರು ತಿಂಗಳ ಹಿಂದೆ ಐತಿಹಾಸಿಕ ಲಿಂಗ ಕಳ್ಳತನವಾದ ಬಗ್ಗೆ ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ವರಿಷ್ಠಾಧಿಕಾರಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಫಟಿಕ ಲಿಂಗ ಪತ್ತೆಗೆ ಶೋಧ ಕಾರ್ಯ ನಡೆಸಲಾಗಿದೆ. ಕೂಡಲೇ ಪತ್ತೆ ಮಾಡಲಾಗುವುದು ಎಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.