ಹಾವೇರಿ: ಶಿಕ್ಷಣ ಇಲಾಖೆ ನಿವೃತ್ತ ನೌಕರನೊಬ್ಬ ಸತತ 12 ವರ್ಷ ಎರಡು ಬ್ಯಾಂಕ್ ಶಾಖೆಗಳಲ್ಲಿ ಪಿಂಚಣಿ ಪಡೆಯುವ ಮೂಲಕ ₹19 ಲಕ್ಷ ವಂಚಿಸಿರುವ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದೆ.
ಹಾವೇರಿ ನಗರದ ಶಿವಬಸವನಗರ ಬಡಾವಣೆಯ ನಿವಾಸಿ ಎಸ್.ಎಂ. ಮಲ್ಲಿಕಾರ್ಜುನಸ್ವಾಮಿ ವಂಚನೆ ಮಾಡಿದ ಆರೋಪಿ.
ಹಾವೇರಿ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ಈ ಶಾಖೆಯಲ್ಲಿ 2008ರಿಂದ ಪಿಂಚಣಿ ಪಡೆಯುತ್ತಿದ್ದ ಇವರು, 2009ರಲ್ಲಿ ‘ಪೆನ್ಸನ್ ಪೇಮೆಂಟ್ ಆರ್ಡರ್’ ಅನ್ನುದಾವಣಗೆರೆಯ ಎಸ್‌ಬಿಐ ಬ್ಯಾಂಕ್ ಶಾಖೆಗೆ ವರ್ಗವಾಣೆ ಮಾಡಿಸಿಕೊಂಡು ಎರಡೂ ಬ್ಯಾಂಕ್ ಶಾಖೆಗಳಲ್ಲಿ 2020ರ ಜನವರಿವರೆಗೆ ಪಿಂಚಣಿ ಪಡೆದಿದ್ದಾರೆ.
2020ರ ಫೆಬ್ರುವರಿಯಲ್ಲಿ ವಂಚನೆ ಮಾಡಿರುವುದು ಬ್ಯಾಂಕ್‌ನವರ ಗಮನಕ್ಕೆ ಬಂದ ತಕ್ಷಣ, ಪಿಂಚಣಿ ತಡೆಹಿಡಿದಿದ್ದಾರೆ. ಆರೋಪಿಯ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಖಾತೆಯಲ್ಲಿದ್ದ ಒಟ್ಟು ₹1.33 ಲಕ್ಷವನ್ನು ಹಿಂಪಡೆದು ಸರ್ಕಾರಿ ಖಜಾನತೆಗೆ ಜಮಾ ಮಾಡಲಾಗಿದೆ.
ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.