ಹಾವೇರಿ: ಆಸ್ಟೇಲಿಯಾದ ಸಿಡ್ನಿಯಿಂದ ಹಾವೇರಿ ನಗರಕ್ಕೆ 9,600 ಕಿ.ಮೀ. ಪ್ರಯಾಣ ಮಾಡಿಕೊಂಡು ಬಂದ ಮಹಿಳೆಯೊಬ್ಬರು ಮಂಗಳವಾರ ಲಯನ್ಸ್ ಶಾಲೆಯ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದರು.
ನಗರದ ಬಸವೇಶ್ವರ ನಗರ ಮೂಲದ ಭಾವನಾ ಶಿವಾನಂದ ಅವರು 12 ವರ್ಷಗಳಿಂದ ಹೊರದೇಶದಲ್ಲಿದ್ದು, ಪ್ರಸ್ತುತ ಸಿಡ್ನಿಯಲ್ಲಿ ವಾಸವಾಗಿದ್ದಾರೆ.
‘ದೇಶದ ಅಭಿವೃದ್ಧಿಗೆ ಸಮರ್ಥ ನಾಯಕನ ಆಯ್ಕೆ ಅತ್ಯಗತ್ಯ. ಹೀಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು. ನಾನು ಐದು ವರ್ಷಕ್ಕೊಮ್ಮೆ ಮತ ಹಾಕಲು ಒಂದು ತಿಂಗಳ ಸಂಬಳ ಖರ್ಚು ಮಾಡಿಕೊಂಡು ಕರ್ನಾಟಕಕ್ಕೆ ಬರುತ್ತೇನೆ. ಆದರೆ ಇಲ್ಲಿ ಮತದಾನದ ಪ್ರಮಾಣ ತುಂಬಾ ಕಡಿಮೆ ಇದೆ. ವಿದ್ಯಾವಂತರೇ ಹೆಚ್ಚಿರುವ ಬೆಂಗಳೂರು ನಗರದಲ್ಲಿ ಅತಿ ಕಡಿಮೆ ಮತದಾನವಾಗುತ್ತದೆ. ಮತದಾನ ಮಾಡದಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.