ADVERTISEMENT

ಬ್ಯಾಡಗಿ | ಮೆಣಸಿನಕಾಯಿ ಆವಕದಲ್ಲಿ ಮತ್ತೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 15:17 IST
Last Updated 18 ಜೂನ್ 2024, 15:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬ್ಯಾಡಗಿ: ಇಲ್ಲಿಯ ಮೆಣಸಿನಕಾಯಿ ಮಾರುಕಟ್ಟೆಗೆ ಮಂಗಳವಾರ 6,185 ಚೀಲ (1,546 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಇಳಿಕೆಯಾಗಿದೆ.

ಮಾರುಕಟ್ಟೆಗೆ ಕಳೆದ ಗುರುವಾರ 9,207 ಚೀಲ (2,301 ಕ್ವಿಂಟಲ್‌) ಮೆಣಸಿನಕಾಯಿ ಆವಕವಾಗಿತ್ತು. ಸೋಮವಾರ ಬಕ್ರೀದ್‌ ಹಬ್ಬದ ನಿಮಿತ್ತ ಮಾರುಕಟ್ಟೆಗೆ ರಜೆ ಘೋಷಿಸಲಾಗಿತ್ತು. ಹೀಗಾಗಿ ಮಂಗಳವಾರ ಆವಕದಲ್ಲಿ ಹೆಚ್ಚಳವಾಗಬಹುದು ಎನ್ನುವ ವರ್ತಕರ ನಿರೀಕ್ಷೆ ಹುಸಿಯಾಗಿದೆ. ಮಂಗಳವಾರ ಪ್ರಾಂಗಣದಲ್ಲಿ ಕೇವಲ 84 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದೆ.

ADVERTISEMENT

ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 33 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. 42 ಚೀಲ ಡಬ್ಬಿ ಮೆಣಸಿನಕಾಯಿ ₹ 30,000, 14 ಚೀಲ ಕಡ್ಡಿ ಮೆಣಸಿನಕಾಯಿ ₹ 27,100 ಮತ್ತು ಗುಂಟೂರು ತಳಿ ಮೆಣಸಿನಕಾಯಿ ₹ 17,500 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ.

ಡಬ್ಬಿ ಮೆಣಸಿನಕಾಯಿ ಕಳೆದ ಗುರುವಾರಕ್ಕಿಂತ ಗರಿಷ್ಠ ಬೆಲೆಯಲ್ಲಿ ಕ್ವಿಂಟಲ್‌ಗೆ ₹ 2 ಸಾವಿರ ಇಳಿಕೆಯಾಗಿದೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ₹ 28,269, ಬ್ಯಾಡಗಿ ಕಡ್ಡಿ ₹ 24,509 ಹಾಗೂ ಗುಂಟೂರ ತಳಿ ₹ 11,269 ರಂತೆ ಮಾರಾಟವಾಗಿದೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ 33 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಮಂಗಳವಾರದ ಮಾರುಕಟ್ಟೆ ದರ (ಪ್ರತಿ ಕ್ವಿಂಟಲ್‌ಗೆ)

(ಕನಿಷ್ಠ– ಗರಿಷ್ಠ)

ಬ್ಯಾಡಗಿ ಕಡ್ಡಿ ₹ 2,259- ₹ 27,100
ಬ್ಯಾಡಗಿ ಡಬ್ಬಿ ₹ 2,809- ₹ 30,000
ಗುಂಟೂರ ತಳಿ ₹ 0809-₹ 17,500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.