ಹಾವೇರಿ: ನಗರದ ಹೊಸಮಠದ ಬಸವಕೇಂದ್ರದಲ್ಲಿಅಕ್ಕಮಹಾದೇವಿ ಮಹಿಳಾ ಬಳಗದ ಸಹಯೋಗದಲ್ಲಿ ಮಂಗಳವಾರ
ಅಕ್ಕಮಹಾದೇವಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಜೀವನದ ಸತ್ಯಗಳನ್ನು ಆಧ್ಯಾತ್ಮಿಕ ನಿಧಿಯ ರತ್ನಗಳನ್ನು ನಿರೂಪಿಸಿ, ಅದನ್ನು ಪಡೆಯುವ ವಿಧಾನವನ್ನು ತಿಳಿಸಿಕೊಡುವ ಧರ್ಮವು ಯಾರೊಬ್ಬರ ಆಸ್ತಿಯೂ ಅಲ್ಲ ಎಂದು ಸಾರಿದ ಅಕ್ಕಮಹಾದೇವಿಮಹಿಳಾ ಸಮಾಜದ ಮೇರು ಪರ್ವತವಾಗಿ ಬೆಳಗಿದರು ಎಂದು ಬಣ್ಣಿಸಿದರು.
‘ಓಡುವ ಮನಸ್ಸನ್ನು ನಿಲ್ಲಿಸಿದ ಅಕ್ಕ ನಿರಾಕಾರ ದೇವನ ಸತಿಯಾದಳು. ಲೋಕದ ಎಲ್ಲಾ ಕ್ರಿಯೆಗಳಿಗೆ ಸೂರ್ಯನೇ ಕೇಂದ್ರಬೀಂದು. ಸೂರ್ಯನ ಉದಯವು ಜಗದ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಸಾರಿದರು. ಸಹಸ್ರಾರು ವರ್ಷಗಳಿಂದ ಬಂಧನದಲ್ಲಿ ಬಾಳುತ್ತಿದ್ದ ಸ್ತ್ರೀ ಕುಲಕ್ಕೆ ಗೌರವದ ಸ್ಥಾನಮಾನ ತಂದುಕೊಡುವ ಮುಖಾಂತರ ಮಹಿಳೆಯರು ಸಮಾಜದ ಎಲ್ಲ ಸ್ತರಗಳಲ್ಲಿ ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲಳು ಎಂಬುದನ್ನು ಜಗತ್ತಿಗೆ ಸಾಬೀತು ಪಡಿಸಿದ ಧೀರ ಮಹಿಳೆ ಎಂದು ಗುಣಗಾನ ಮಾಡಿದರು.
ಲಲಿತಾ ಹಿರೇಮಠ, ಕಮಲಾ ಬುಕ್ಕಶೆಟ್ಟಿ, ನಾಗಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.