ADVERTISEMENT

ಅಖಿಲ ಭಾರತ ವೀರಶೈವ ಮಹಾಸಭಾ ಚುನಾವಣೆ: ಬಹಿಷ್ಕಾರ ನಿರ್ಣಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 14:13 IST
Last Updated 3 ಜುಲೈ 2024, 14:13 IST
ಪ್ರಶಾಂತ ಮುಚ್ಚಂಡಿ
ಪ್ರಶಾಂತ ಮುಚ್ಚಂಡಿ   

ಹಾನಗಲ್: ‘ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಮಹಾಸಭಾ ಸದಸ್ಯ ಪ್ರಶಾಂತ ಮುಚ್ಚಂಡಿ ಹೇಳಿದರು.

ಇಲ್ಲಿನ ಕುಮಾರೇಶ್ವರ ವಿರಕ್ತಮಠದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಬಹಿಷ್ಕಾರದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈಗಾಗಲೇ ಚುನಾವಣಾ ಪ್ರಕ್ರಿಯೆಗಳು ಆರಂಭಗೊಡಿವೆ. ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆ ಮಾಡಿದ ಹಾನಗಲ್ ಕುಮಾರೇಶ್ವರ ವಿರಕ್ತಮಠದ ಆಸ್ತಿಗಳನ್ನು ಸಂರಕ್ಷಿಸಬೇಕಾಗಿದ್ದ ಅಖಿಲ
ಭಾರತ ವೀರಶೈವ ಮಹಾಸಭಾ ನಿರ್ಲಕ್ಷ್ಯ ವಹಿಸಿದ್ದು, ಇದು ತಾಲ್ಲೂಕಿನ ವೀರಶೈವ ಮಹಾಸಭಾ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ’ ಎಂದರು.

ADVERTISEMENT

‘ಹಾನಗಲ್ ವಿರಕ್ತಮಠ ಮತ್ತು ಮಠದ ಆಸ್ತಿ ಸಂಕಷ್ಟದಲ್ಲಿರುವಾಗ ಮಹಾಸಭಾ ಚುನಾವಣೆಯ ಅವಶ್ಯಕತೆ ಇಲ್ಲ. ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ, ಜಿಲ್ಲಾ ಘಟಕ ಮತ್ತು
ರಾಜ್ಯ ಘಟಕದಿಂದ ನಮ್ಮ ಮಠದ ವಿಷಯವನ್ನು ಇತ್ಯರ್ಥಗೊಳಿಸುವವರೆಗೆ ಚುನಾವಣೆ ಬೇಡ’ ಎಂದು ಆಗ್ರಹಿಸಿದರು.

ಈರಣ್ಣ ಹುಗ್ಗಿ, ರವೀಂದ್ರ ಚಿಕ್ಕೇರಿ, ಬಿ.ಎಸ್.ದಳವಾಯಿ, ಬಸು ಹಾದಿಮನಿ, ವೀರಣ್ಣ ಸಿಂಧೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.