ADVERTISEMENT

ತಡಸ | ದುರಸ್ತಿಯಾಗದ ರಸ್ತೆ: ಅಪಘಾತಕ್ಕೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 4:48 IST
Last Updated 4 ಜುಲೈ 2024, 4:48 IST
ಕುನ್ನೂರ ಗ್ರಾಮದಿಂದ ಶ್ಯಾಡಂಬಿ ಹಾಗೂ ಎನ್ಎಚ್ 4 ಸಂಪರ್ಕಿಸುವ ರಸ್ತೆ ಹಾಳಾಗಿದೆ
ಕುನ್ನೂರ ಗ್ರಾಮದಿಂದ ಶ್ಯಾಡಂಬಿ ಹಾಗೂ ಎನ್ಎಚ್ 4 ಸಂಪರ್ಕಿಸುವ ರಸ್ತೆ ಹಾಳಾಗಿದೆ   

ತಡಸ: ಹೋಬಳಿ ಸೇರಿದಂತೆ ಸಮೀಪದ ಹಲವೆಡೆಯ ರಸ್ತೆಗಳು ತಗ್ಗು ಗುಂಡಿ ಬಿದ್ದಿದ್ದು ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.

ಭಾರಿ ಮಳೆ ಬಂದರೆ ಬೆಣ್ಣೆ ಹಳ್ಳ ಕಾಲುವೆ ತುಂಬಿ ಹರಿಯಲು ಆರಂಭವಾದರೆ ಹೊಲ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗುತ್ತದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ.

‘ಅಡವಿಸುಮಾಪೂರ ಮಾರ್ಗವಾಗಿ ಹೊನ್ನಾಪುರ ಹಾಗೂ ಎನ್‌ಎಚ್ 4 ಸಂಪರ್ಕಿಸುವ ರಸ್ತೆಯುದ್ದಕ್ಕೂ  ತುಗ್ಗು– ಗುಂಡಿಗಳು ಬಿದ್ದಿದ್ದು, ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿವೆ. ರಸ್ತೆ ಕಾಮಗಾರಿ ನಡೆಸಿ ವರ್ಷ ಗತಿಸುವುದರ ಒಳಗೆ ಹಾಳಾಗುತ್ತವೆ’ ಎಂದು ಈಶ್ವರಗೌಡ ಪಾಟೀಲ್ ತಿಳಿಸಿದರು.

ADVERTISEMENT

‘ಹೊನ್ನಾಪುರ ಕೆರೆಯ ದಂಡಿಗೆ ಹಚ್ಚಿಕೊಂಡಿರುವ ಮೇಲ್ಸೇತುವೆ ಸಂಪೂರ್ಣವಾಗಿ ಹಾಳಾಗಿದ್ದು, ಅಪಾರ ಪ್ರಮಾಣದ ಮಳೆ ನೀರು ನಿಲ್ಲುತ್ತಿದ್ದು ಕೆರೆ ತುಂಬಿ ಹರಿದರೆ ಸೇತುವೆ ಕುಸಿದು ಬೀಳುವ ಸಾಧ್ಯತೆ ಇದೆ. ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ ಒತ್ತಾಯಿಸಿದ್ದಾರೆ.

‘ಕುನ್ನೂರ ಗ್ರಾಮದಿಂದ ಶ್ಯಾಡಂಬಿ ಹಾಗೂ ಎನ್ಎಚ್ 4 ಸಂಪರ್ಕಿಸುವ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ ಮುಗಿದಿದ್ದು ಹಿಂದೆ ಮುಂದೆ ಡಾಂಬರೀಕರಣ ಕಾಮಗಾರಿ ಆಗದೆ ವಾಹನ ಸವಾರರು ಅಪಘಾತಕ್ಕೀಡಾಗುತಿದ್ದರೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸಿ ಹಾಗೂ ಬೆಣ್ಣೆ ಹಳ್ಳದ ಕಾಲುವೆ ಕಾಮಗಾರಿ ಪೂರ್ಣಗೊಂಡು ಸಂಚಾರಕ್ಕೆ ತೊಂದರೆ ಆಗುತ್ತಿದ್ದು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ನಿಂಗರಾಜ ಕಾಳಿ ಒತ್ತಾಯಿಸಿದರು.

‘ಅಡವಿ ಸೋಮಾಪೂರ ಗ್ರಾಮದಿಂದ ಎನ್ಎಚ್ 4 ಸಂಪರ್ಕಿಸುವ ರಸ್ತೆಯ ಕಾಮಗಾರಿ ಟೆಂಡರ್ ಕರೆಯಲಾಗಿದ್ದು, ಬೆಣ್ಣೆ ಹಳ್ಳ ಕಾಲುವೆ ಕಾಮಗಾರಿಗೆ ಅಕ್ಕ ಪಕ್ಕದ ರೈತರು ತಕರಾರು ತೆಗದಿದ್ದಾರೆ. ನ್ಯಾಯಾಲಯ ಅನುಮತಿ ನೀಡಿದೆ. ಕೆಲ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಎಂಜನಿಯರ್ ಬಸವರಾಜ ಡಿ.ಬಿ ತಿಳಿಸಿದರು.

ಅಡವಿಸುಮಾಪೂರ ಮಾರ್ಗವಾಗಿ ಹೊನ್ನಾಪುರ ಹಾಗೂ ಎನ್ ಎಚ್ 4 ಸಂಪರ್ಕಿಸುವ ರಸ್ತೆ ಹಾಳಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.