ಬ್ಯಾಡಗಿ: ಪಟ್ಟಣದ ಕದರಮಂಡಲಗಿ ರಸ್ತೆಯ ಸಮಗ್ರ ಸಮಾಜ ಕಾರ್ಯನಿರ್ವಹಣಾ ಕೇಂದ್ರ ಸ್ನೇಹ ಸದನದಲ್ಲಿ ರೋಟರಿ ಕ್ಲಬ್ ವತಿಯಿಂದ ನಾಲ್ಕು ಕ್ಲಸ್ಟರ್ ಅಂಗನವಾಡಿ ಮಕ್ಕಳ ನೃತ್ಯ ಸ್ಪರ್ಧೆ ಬುಧವಾರ ಏರ್ಪಡಿಸಲಾಗಿತ್ತು. ಅದರಲ್ಲಿ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಪ್ರತಿಯೊಂದು ಮಗುವಿನಲ್ಲಿಯೂ ಪ್ರತಿಭೆ ಇದ್ದು, ಅದನ್ನು ಪ್ರದರ್ಶಿಸಲು ಸೂಕ್ತ ವೇದಿಕೆ ಬೇಕು. ಈ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಕಳೆದ ನಾಲ್ಕು ವರ್ಷಗಳಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ಸ್ನಹ ಸದನದ ನಿರ್ದೇಶಕಿ ರೂಪ ಮಾತನಾಡಿದರು. ಸ್ನೇಹ ಸದನದಲ್ಲಿ ಏರ್ಪಡಿಸಿರುವ ಇಂತಹ ಅಭೂತಪೂರ್ವ ಕಾರ್ಯಕ್ರಮದಲ್ಲಿ ಸಾಕಷ್ಟು ಮಕ್ಕಳು ಭಾಗವಹಿಸಿದ್ದಾರೆ. ಅವರಿಗೆ ಇಂತಹ ಪ್ರೋತ್ಸಾಹ ಅಗತ್ಯವಾಗಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎಂ.ಬೂದಿಹಾಳಮಠ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಕಿರಣ ಮಾಳೇನಹಳ್ಳಿ, ಸತೀಶ ಅಗಡಿ, ಜಗದೀಶ ದೇವಿಹೊಸೂರ, ಸಿದ್ಧಲಿಂಗೇಶ ಕೊಂಚಿಗೆರಿ, ಬಸವರಾಜ ಸುಂಕಾಪುರ, ಆನಂದ ಸೊರಟೂರ, ಜೆ.ಎಚ್.ಪಾಟೀಲ, ಎಂ.ಎನ್.ಬಂದಮ್ಮನವರ, ಪುಷ್ಪಾ ಇಂಡಿಮಠ, ರೂಪ,ಸರಸ್ವತಿ, ರಹಿಮಾ, ಫಾತಿಮಾ, ಲಲಿತ, ರೇಣುಕಾ, ಸಹಾಯಕಿಯರಾದ ಮಮತಾ, ಶೈಲಾ, ದೀಪ, ಸವಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.