ADVERTISEMENT

ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾರಕೇಶಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 16:23 IST
Last Updated 2 ಅಕ್ಟೋಬರ್ 2024, 16:23 IST
ತಿಳವಳ್ಳಿ ಸಮೀಪದ ಕೂಸನೂರ ಗ್ರಾಮದ ಮಾರಿಕಾಂಬಾ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾರಕೇಶ ಮಠದ ಅವರನ್ನು ಸನ್ಮಾನಿಸಲಾಯಿತು
ತಿಳವಳ್ಳಿ ಸಮೀಪದ ಕೂಸನೂರ ಗ್ರಾಮದ ಮಾರಿಕಾಂಬಾ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾರಕೇಶ ಮಠದ ಅವರನ್ನು ಸನ್ಮಾನಿಸಲಾಯಿತು   

ತಿಳವಳ್ಳಿ: ‘ಶಿಕ್ಷಣ ಹಾಗೂ ಅರಿವು ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಕೂಸನೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುನೀಲ ಹಿರೇಮಠ ಹೇಳಿದರು.

ಸಮೀಪದ ಕೂಸನೂರ ಗ್ರಾಮದ ಮಾರಿಕಾಂಬಾ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ಬುಧವಾರ ನಡೆದ 2024-25ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾರಕೇಶ ಮಠದ ಅವರಿಗೆ ಗ್ರಾಮಸ್ಥರಿಂದ ಹಾಗೂ ಸರ್ವ ಗುರು ಬಳಗದವರಿಂದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸೇವಾಲಾಲ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಲಮಾಣಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಭದ್ರಗೌಡ ಪಾಟೀಲ, ನಾಗಪ್ಪ ದೊಡ್ಡಮನಿ, ನಿಂಗಪ್ಪ ಬಳೆಗಾರ, ಸೋಮಣ್ಣ ರೇವಣ್ಣನವರ, ನಾಗರಾಜ ಗೊಂದಿ, ಮನೋಹರ ನಾಯ್ಕ್, ಬಸವರಾಜ ಕುರಿಯವರ, ಪ್ರಕಾಶ ಲಮಾಣಿ, ತಾರಕೇಶ ಮಠದ, ಶಾಂತಪ್ಪ ಲಂಕೇರ, ವೀರಭದ್ರಪ್ಪ ಕೆ, ಜಲಾನಿ ಹೊಂಕಣ, ರಶ್ಮಿ ಕುಲಕರ್ಣಿ, ಚಂದ್ರಕಲಾ ಅಂಬಕ್ಕಿ, ಗುತ್ತೇಪ್ಪ ಮಾಯಕ್ಕನವರ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.