ADVERTISEMENT

ಬ್ರಾಹ್ಮಣ ಸಮಾವೇಶ ಫೆ.25ರಂದು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 16:03 IST
Last Updated 22 ಫೆಬ್ರುವರಿ 2023, 16:03 IST
ವಸಂತ ಮೊಕ್ತಾಲಿ 
ವಸಂತ ಮೊಕ್ತಾಲಿ    

ಹಾವೇರಿ: ಅಶ್ವಿನಿನಗರದ ಹಾವೇರಿ ಜಿಲ್ಲಾ ಬ್ರಾಹ್ಮಣ ಸಮಾಜದ ವತಿಯಿಂದ ‘ಹಾವೇರಿ ಜಿಲ್ಲಾ ಪ್ರಥಮ ಬ್ರಾಹ್ಮಣ ಸಮಾವೇಶ’ವನ್ನು ಫೆ.25ರಂದು ಬೆಳಿಗ್ಗೆ 10 ಗಂಟೆಗೆ ಹಾವೇರಿ ತಾಲ್ಲೂಕಿನ ಅಗಡಿಯ ಶ್ರೀಕ್ಷೇತ್ರ ಆನಂದವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಮೊಕ್ತಾಲಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಆನಂದವನದ ಗುರುದತ್ತಮೂರ್ತಿ ಚಕ್ರವರ್ತಿ ಸಾನ್ನಿಧ್ಯ ವಹಿಸಲಿದ್ದು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಅಶೋಕ ಹಾರನಹಳ್ಳಿ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಡಾ.ಕೆ.ಪಿ.ಪುತ್ತುರಾಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಮಹಿಳಾ ಜಿಲ್ಲಾ ಸಂಚಾಲಕಿ ದೀಪಾ ಎನ್‌.ಪಾಟೀಲ ಅಧ್ಯಕ್ಷತೆಯಲ್ಲಿ ಮಹಿಳಾ ಗೋಷ್ಠಿಯು ನಡೆಯಲಿದ್ದು, ಅತಿಥಿಗಳಾಗಿ ರಾಜ್ಯ ಸಂಚಾಲಕಿ ಡಾ.ಶುಭಮಂಗಳಾ ಸುನೀಲ ಭಾಗವಹಿಸಲಿದ್ದಾರೆ. ಸುರೇಖಾ ದತ್ತಾತ್ರೇಯ ಕುಲಕರ್ಣಿ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹1.25 ಲಕ್ಷ ವಿದ್ಯಾರ್ಥಿವೇತನ ಹಾಗೂ ಪ್ರತಿಭಾ ಪುರಸ್ಕಾರ ನೀಡಿದ್ದೇವೆ. ಎಂಜಿನಿಯರಿಂಗ್‌ ಮತ್ತು ಮೆಡಿಕಲ್‌ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ ನೀಡಲು ಯೋಜನೆ ಹಾಕಿಕೊಂಡಿದ್ದೇವೆ. ಜಿಲ್ಲೆಯ ಎಲ್ಲ ವಿಪ್ರ ಬಂಧು ಭಗಿನಿಯರು ಸಮಾವೇಶಕ್ಕೆ ಬಂದು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ದೀಪಾ ಪಾಟೀಲ, ಸರಿತಾ ದೀಕ್ಷಿತ್‌, ಭಾಗ್ಯಲಕ್ಷ್ಮಿ, ಎಂ.ಆರ್‌.ಪಾಟೀಲ, ಪ್ರಭಾಕರರಾವ್‌ ಮಂಗಳೂರ, ಹನುಮಂತನಾಯಕ್‌ ಬಾದಾಮಿ, ಆರ್‌.ಎಂ. ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.