ADVERTISEMENT

ಉಪಚುನಾವಣೆ | ಶಿಗ್ಗಾವಿ ಅಭಿವೃದ್ಧಿ ಮಾಡದ ಬೊಮ್ಮಾಯಿ: ಸಚಿವ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 7:48 IST
Last Updated 10 ನವೆಂಬರ್ 2024, 7:48 IST
<div class="paragraphs"><p>ಸಚಿವ ಈಶ್ವರ ಬಿ. ಖಂಡ್ರೆ</p></div>

ಸಚಿವ ಈಶ್ವರ ಬಿ. ಖಂಡ್ರೆ

   

ಹುಬ್ಬಳ್ಳಿ: 'ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಶಿಗ್ಗಾವಿ ಕ್ಷೇತ್ರಕ್ಕೆ ಯಾವ ಕೊಡುಗೆಯೂ ನೀಡಿಲ್ಲ. ಹೀಗಿದ್ದಾಗ ಯಾವ ಮುಖ ಇಟ್ಟುಕೊಂಡು ಅವರು ಅಲ್ಲಿ ಮತ ಯಾಚಿಸುತ್ತಾರೆ' ಎಂದು ಸಚಿವ ಈಶ್ವರ ಖಂಡ್ರೆ ಪ್ರಶ್ನಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಶಿಗ್ಗಾವಿಯಲ್ಲಿ ಯಾವುದೇ ಅಭಿವೃದ್ಧಿ‌ ಕಾರ್ಯಗಳು ನಡೆದಿಲ್ಲ. ಒಂದು‌ ಕ್ರೀಡಾಂಗಣ ನಿರ್ಮಿಸಿಕೊಡಿ ಎಂದು ಅಲ್ಲಿಯ ಯುವಕರು ವಿನಂತಿಸಿದ್ದರೂ, ಬಿಜೆಪಿಯಿಂದ ಅದು ಸಾಧ್ಯವಾಗಿಲ್ಲ. ಏನೂ ಅಭಿವೃದ್ಧಿ ಕೆಲಸಗಳನ್ನು ಮಾಡದೆ, ಯುವಕರಿಂದ ಮತ್ತು ರೈತರಿಂದ ಮತ ಯಾಚಿಸುತ್ತಿದ್ದಾರೆ' ಎಂದು ವ್ಯಂಗ್ಯವಾಡಿದರು.

ADVERTISEMENT

ಉಪ ಚುನಾವಣೆಯ ಮೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಪರ ಅಲೆ‌ ಇದೆ. ಸ್ಪಷ್ಟ ಬಹುಮತ‌ ಪಡೆದು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಯಾವುದೇ ಭ್ರಷ್ಟಾಚಾರ ನಡೆಸದೆ ನಾವು ಅಭಿವೃದ್ದಿ ಮಾಡಿ ತೋರಿಸಿದ್ದೇವೆ. ಬಿಜೆಪಿಯವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದು, ಏನೂ ಮಾಡದೆ ಮೋಸ ಮಾಡಿದ್ದಾರೆ. ನಾವು ಮಧ್ಯವರ್ತಿ ಇಲ್ಲದೆ ಪಂಚ ಗ್ಯಾರೆಂಟಿ ಯೋಜನೆ ನೀಡಿ, ನುಡಿದಂತೆ ನಡೆದಿದ್ದೇವೆ. ಹೀಗಾಗಿ‌ ಬಿಜೆಪಿಯವರ ಮಾತಿಗೆ ಮತದಾರರು ಮರುಳಾಗುವುದಿಲ್ಲ' ಎಂದರು.

'ಶಿಗ್ಗಾವಿ ಕ್ಷೇತ್ರದ ಜನತೆಗೆ ಪ್ರಗತಿ‌ಬೇಕಾಗಿದ್ದು, ಕಾಂಗ್ರೆಸ್‌ಗೆ ಬೆಂಬಲ‌ ಸೂಚಿಸುತ್ತಿದ್ದಾರೆ. ನಮ್ಮ ಅಭ್ಯರ್ಥಿ ಯಾಸಿರಖಾನ್ ಪಠಾನ್ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ' ಎಂದು ಸಚಿವ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಹಿಟ್ಲರ್ ಆಡಳಿತ: ಖಂಡ್ರೆ ಆಕ್ರೋಶ

'ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದಾಗ ಕೇಂದ್ರ ಸರ್ಕಾರದಿಂದ ಸುತ್ತೋಲೆ ಬಂದಿದೆ ಎಂದು, ಹಿಂದುಖಿದ ವರ್ಗದ ಮಕ್ಕಳ ಶಿಷ್ಯವೇತನ ಬಂದ್ ಮಾಡಿದೆ. ಬಿಜೆಪಿ‌ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ. ದೇಶದಲ್ಲಿ ಅವರದ್ಸು ಹಿಟ್ಲರ್ ಶಾಹಿ‌ ಆಡಳಿತ' ಎಂದು ಸಚಿವ ಈಶ್ವರ ಖಂಡ್ರೆ ಅಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.