ADVERTISEMENT

ಬ್ಯಾಡಗಿ: ಆರಂಭವಾಗದ ಜಾನುವಾರು ಮಾರುಕಟ್ಟೆ

ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಬಳಿ ₹2.50 ಕೋಟಿ ವೆಚ್ಚದಲ್ಲಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 6:11 IST
Last Updated 8 ನವೆಂಬರ್ 2024, 6:11 IST
<div class="paragraphs"><p>ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಬಳಿ ಕಳೆದ ಮೂರು ವರ್ಷದ ಹಿಂದೆ ₹2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಾನುವಾರು ಮಾರುಕಟ್ಟೆ</p></div>

ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಬಳಿ ಕಳೆದ ಮೂರು ವರ್ಷದ ಹಿಂದೆ ₹2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಾನುವಾರು ಮಾರುಕಟ್ಟೆ

   

ಬ್ಯಾಡಗಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ವ್ಯಾಪಾರಕ್ಕೆ ಛಾಪು ಮೂಡಿಸಿರುವ ಬ್ಯಾಡಗಿ ಮಾರುಕಟ್ಟೆ ತನ್ನ ವ್ಯಾಪಾರ ವಹಿವಾಟನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಚಿಕ್ಕಬಾಸೂರು ಬಳಿ ಉಪಮಾರುಕಟ್ಟೆ ಹೊಂದಿದ್ದರೆ ಚಿಕ್ಕಣಜಿ ಬಳಿ ಮೂರು ವರ್ಷದ ಹಿಂದೆ ₹2.5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಜಾನುವಾರು ಮಾರುಕಟ್ಟೆ ಇನ್ನು ವಹಿವಾಟು ನಡೆಸದೆ ಕಳೆಗುಂದಿದೆ.

ಕಾಂಪೌಂಡ್‌ ಗೋಡೆ ಕುಸಿದಿದೆ. ಗಿಡಗಂಟೆಗಳು ಬೆಳೆದಿವೆ. ಲಿಂಗಾಪುರ–ಹಂಸಭಾವಿ ಮತ್ತು ತಿಳವಳ್ಳಿ–ಹಂಸಭಾವಿ ಬಳಿ ತಲೆ ಎತ್ತಿರುವ ಜಾನುವಾರು ಮಾರುಕಟ್ಟೆ ಪ್ರಾಂಗಣ ವ್ಯವಸ್ಥಿತ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಚಿಕ್ಕಣಜಿ ಗ್ರಾಮದ ರೈತ ಮುಖಂಡ ಮಲ್ಲೇಶಪ್ಪ ಡಂಬಳ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಸೂಕ್ತ ಪ್ರಚಾರದ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಮಾರುಕಟ್ಟೆ ನಿರ್ಮಿಸಿಯೂ ವಹಿವಾಟು ನಡೆಸದೆ ಕೋಟ್ಯಂ ತರ ಹಣ ಅಪವ್ಯಯವಾಗುತ್ತಿದೆ. ಶುಕ್ರವಾರ ಸಮೀಪದ ಹಂಸಭಾವಿಯಲ್ಲಿ ಜಾನುವಾರು ಜೋರಾಗಿ ನಡೆಯುತ್ತಿದೆ. ಆದರೆ ಶನಿವಾರ ಚಿಕ್ಕಣಜಿ ಬಳಿಯ ಹೊಸ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಯುತ್ತಿಲ್ಲ.

‘ಜಾನುವಾರು ಮಾರುಕಟ್ಟೆ ಆರಂಬಿಸುವ ಕುರಿತು ಪ್ರಚಾರ ಹೆಚ್ಚಬೇಕಾಗಿದೆ. ಕರಪತ್ರಗಳನ್ನು ಹಂಚಿ ರೈತರಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಈ ಹಿಂದಿನ ಆಡಳಿತ ಮಂಡಳಿ ಕೊನೆಯ ಗಳಿಗೆಯಲ್ಲಿ ಜಾನುವಾರು ಮಾರುಕಟ್ಟೆಯನ್ನು ಉದ್ಘಾಟಿಸಿ ಕೈ ತೊಳೆದುಕೊಂಡಿದೆ. ಹೆಚ್ಚು ಪ್ರಚಾರ ನಡೆಸದ ಹಿನ್ನೆಲೆಯಲ್ಲಿ ವಿನಿಯೋಗಿಸದ ಹಣ ವ್ಯರ್ಥವಾಗಿತ್ತಿದೆ’ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಆರೋಪಿಸಿದರು.

ನೀತಿ ಸಂಹಿತೆ: ಜಾನುವಾರು ಮಾರುಕಟ್ಟೆ ವಹಿವಾಟು ಆರಂಭ ವಿಳಂಬ ಬ್ಯಾಡಗಿ ತಾಲ್ಲೂಕಿನ ಚಿಕ್ಕಣಜಿ ಬಳಿ ನಿರ್ಮಿಸಿದ ಮಾರುಕಟ್ಟೆಯಲ್ಲಿ ದನಗಳಿಗೆ ಕುಡಿಯುವ ನೀರು ಬೃಹತ್‌ ತೂಕದ ಯಂತ್ರ (ವೇಬ್ರಿಜ್ಡ್‌) ಶೌಚಾಲಯ ಮೇವು ಸಂಗ್ರಹಿಸುವ ಸ್ಥಳ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಚಾರ ನಡೆಸಿ ಜಾನುವಾರು ಮಾರುಕಟ್ಟೆ ವಹಿವಾಟು ಆರಂಭಿಸಲು ಚಿಂತನೆ ನಡೆಸಲಾಗಿದೆ. ಆದರೆ ಈಗ ಶಿಗ್ಗಾವಿ ಉಪಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾನುವಾರು ಮಾರುಕಟ್ಟೆಯ ವಹಿವಾಟು ಆರಂಭಕ್ಕೆ ಸ್ವಲ್ಪ ವಿಳಂಬವಾಗಿದೆ. ಶೌಚಾಲಗಳ ದುರಸ್ತಿ ಕುಸಿದು ಬಿದ್ದಿರುವ ಕಾಂಪೌಂಡ್‌ ಗೋಡೆ ನಿರ್ಮಾಣದ ಬಳಿಕ ವಹಿವಾಟು ಆರಂಭಿಸಲಾಗುವುದು ಈ ಕುರಿತು ಸರ್ಕಾರದ ಹಂತದಲ್ಲಿ ಸಮಾಲೋಚನೆ ನಡೆಸಲಾಗಿದೆ ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಎಂ.ವಿ.ಶೈಲಜಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.